ಪಂಚವಾದ್ಯ ತರಬೇತಿ ಶಿಬಿರ…

ಬಂಟ್ವಾಳ: ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಜೀಪಮುನ್ನೂರು ಇಲ್ಲಿ ಪಂಚವಾದ್ಯ ತರಬೇತಿ ಶಿಬಿರ ಜು. 11 ರಂದು ಉದ್ಘಾಟನೆಗೊಂಡಿತು.
ಸಜಿಪಮಾಗಣೆ ತಂತ್ರಿಎಂ ಸುಬ್ರಹ್ಮಣ್ಯ ಭಟ್ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ ವಹಿಸಿದ್ದರು. ಸುಂದರ ಪದಾತಿ, ಕೃಷ್ಣಭಟ್, ಧನೇಶ್ವರ ರಾವ್, ದೇವಪ್ಪ ಮಡಿವಾಳ, ಎಂ ಕೆ ಶಿವ, ಚಿತ್ರ ಎಸ್ ರೈ, ರಾಜು ಪೂಜಾರಿ, ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.