ಸುಳ್ಯ ಗುರುಂಪು ಬರೆ ಕುಸಿತ ಸ್ಥಳಕ್ಕೆ ಕೆ.ಪಿ.ಸಿ.ಸಿ ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ಭೇಟಿ …
ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ ಒದಗಿಸಲು ಆಗ್ರಹ…

ಸುಳ್ಯ :ಸುಳ್ಯದ ಗುರುಂಪು ಬಳಿ ಸಂಭವಿಸಿದ ಗುಡ್ಡ ಜರಿದ ಘಟಣಾ ಸ್ಥಳಕ್ಕೆ ಕೆ.ಪಿ.ಸಿ.ಸಿ.ಸಿ ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ಭೇಟಿ ನೀಡಿದರು.
ಘಟಣೆಯಲ್ಲಿ ಇಬ್ಬರು ಗಂಡಸರು ಹಾಗೂ ಓರ್ವ ಮಹಿಳೆ ಸಾವನಪ್ಪಿದ್ದು ಮೃತರಾದ ಗದಗದ ಮುಂಡರಗಿ ಸೋಮಶೇಖರ್, ಶ್ರೀಮತಿ ಶಾಂತ ದಂಪತಿ ಹಾಗೂ ಮತ್ತೊರ್ವನ ಕುಟುಂಬಗಳಿಗೆ ಕಾರ್ಮಿಕ ಕಲ್ಯಾಣ ಇಲಾಖೆಯಿಂದ ತಲಾ ರೂ 10 ಲಕ್ಷ ಪರಿಹಾರವನ್ನು ಒದಗಿಸಬೇಕೆಂದು ಟಿ.ಎಂ ಶಹೀದ್ ತೆಕ್ಕಿಲ್ ಸರಕಾರವನ್ನು ಒತ್ತಾಯಿಸಿದ್ದಾರೆ.