ಸುಳ್ಯ – ಜ.31ರಿಂದ ಫೆ.7 ರವರೆಗೆ ಎಸ್ ಕೆಎಸ್ಎಸ್ ಎಫ್ ವಿಖಾಯ ವತಿಯಿಂದ ಪ್ಲಾಸ್ಟಿಕ್ ಹೆಕ್ಕಿಕೊ ಚಳುವಳಿ…
ಸುಳ್ಯ : ಕೆಲವು ದಿನಗಳಿಂದ ಪ್ಲಾಸ್ಟಿಕ್ ನಿಷೇಧದ ಕೂಗು ಕೇಳಿಬರುತ್ತಿದ್ದರೂ ಯಾರು ಇದನ್ನು ಪರಿಗಣಿಸದೇ ಇರುವುದನ್ನು ಹಾಗೂ ನಿಷೇಧ ಹೇರಿದರೂ ಕಂಡಕಂಡಲ್ಲಿ ಪ್ಲಾಸ್ಟಿಕ ನ್ನು ಬಿಸಾಡುವುದನ್ನು ವಿರೋಧಿಸಿ ಪ್ಲಾಸ್ಟಿಕ್ ಹೆಕ್ಕಿಕೊ ಚಳುವಳಿ ಸುಳ್ಯ ಎಸ್ ಕೆ ಎಸ್ಎಸ್ಎಫ್ ವಿಖಾಯ ವತಿಯಿಂದ ‘ಶುಚಿಯಾದ ಪರಿಸರಕ್ಕಾಗಿ ನಾಳಿನ ತಲೆಮಾರಿಗಾಗಿ ಪ್ಲಾಸ್ಟಿಕ್ ಮುಕ್ತರಾಗೋಣ’ಎಂಬ ಧ್ಯೇಯ ವಾಕ್ಯದೊಂದಿಗೆ ಜ.31ರಿಂದ ಫೆ.7 ರ ವರೆಗೆ ನಡೆಯಲಿದೆ.
ಜನವರಿ 31 ರಂದು ಸುಳ್ಯದ ಎಲಿಮಲೆಯಲ್ಲಿ ದ.ಕ.ಜಿಲ್ಲಾ ವಿಖಾಯ ಚೇರ್ಮನ್ ಸಯ್ಯದ್ ಇಸ್ಮಾಯಿಲ್ ತಂಙಳ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ವಿವಿಧ ದಿನಗಳಲ್ಲಿ ಶಾಖೆ ಮಟ್ಟದಲ್ಲಿ ನಡೆಯುವ ಪ್ಲಾಸ್ಟಿಕ್ ಹೆಕ್ಕಿಕೊ ಚಳುವಳಿಯಲ್ಲಿ ಗ್ರಾಮ ಪಂಚಾಯತ್ ,ಸಂಘ ಸಂಸ್ಥೆ ಯವರು ಈ ಕಾರ್ಯಕ್ರಮದಲ್ಲಿ ಕೈಜೋಡಿಸಲಿದ್ದಾರೆ ಎಂದು ಸಂಘಟಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ