ವಿಟಿಯು ರಾಜ್ಯ ಮಟ್ಟ ಸ್ಪರ್ಧೆಯಲ್ಲಿ ಸಹ್ಯಾದ್ರಿ ವಿದ್ಯಾರ್ಥಿಗಳಿಗೆ ಚಿನ್ನ ಮತ್ತು ಕಂಚು ಪದಕ…..

ಮಂಗಳೂರು: ಚಿಕ್ಕಬಳ್ಳಾಪುರದ ಎಸ್‌ಜೆಸಿಐಟಿಯಲ್ಲಿ ನಡೆದ ವಿಟಿಯು ರಾಜ್ಯ ಮಟ್ಟದ ಜೂಡೋ ಸ್ಪರ್ಧೆಯಲ್ಲಿ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ನ ದ್ವಿತೀಯ ವರ್ಷದ ಎಂಬಿಎ ವಿದ್ಯಾರ್ಥಿನಿ ನಮ್ರಶಾ ಎನ್. ಗಾಣಿಗ ಮತ್ತು ಕುಸ್ತಿ ಸ್ಪರ್ಧೆಯಲ್ಲಿ ನಾಲ್ಕನೇ ವರ್ಷದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿನಿ ತೇಜಸ್ವಿನಿ ಎನ್.ವಿ ಚಿನ್ನ ಹಾಗು ಕಂಚಿನ ಪದಕ ಗೆದ್ದಿದ್ದಾರೆ.
ಜೂಡೋ 78 ಕೆಜಿ ವಿಭಾಗದಲ್ಲಿ ನಮ್ರಶಾ ಚಿನ್ನದ ಪದಕ ಮತ್ತು ಕುಸ್ತಿ 72 ಕೆಜಿ ವಿಭಾಗದಲ್ಲಿ ತೇಜಸ್ವಿನಿ ಕಂಚಿನ ಪದಕ ಗೆದ್ದಿದ್ದಾರೆ. ಭಂಡಾರಿ ಪ್ರತಿಷ್ಠಾನದ ಅಧ್ಯಕ್ಷ ಮಂಜುನಾಥ ಭಂಡಾರಿ, ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲ ಡಾ. ಆರ್ ಶ್ರೀನಿವಾಸ ರಾವ್ ಕುಂಟೆ ಮತ್ತು ಆಡಳಿತ ವರ್ಗ ವಿಜೇತರನ್ನು ಅಭಿನಂದಿಸಿದ್ದಾರೆ.Namrasha01 233x300TEJASWINI N V 233x300

Related Articles

Leave a Reply

Your email address will not be published. Required fields are marked *