ಬಂಟ್ವಾಳ ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಭಾವಿ ಸಭೆ…..
ಬಂಟ್ವಾಳ : ಸಾಹಿತಿ, ಸಾಹಿತ್ಯ ಹಾಗೂ ಸಜ್ಜನರನ್ನು ಗೌರವಿಸುವುದು ಸಮಾಜದ ಕರ್ತವ್ಯವಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನದ ಮೂಲಕ ಕನ್ನಡ ಭಾಷೆ , ಸಂಸ್ಕೃತಿಯ ಬಗ್ಗೆ ಜನರಲ್ಲಿ ಜಾಗೃತಿ ,ಅಭಿಮಾನ ಮೂಡಿಸುವುದು ಅಗತ್ಯವಾಗಿದೆ ಎಂದು ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಸಂಚಾಲಕ ಜೆ. ಪ್ರಹ್ಲಾದ ಶೆಟ್ಟಿ ಹೇಳಿದರು.
ಅವರು ಮಾಣಿಯಲ್ಲಿ ಬಂಟ್ವಾಳ ತಾಲೂಕಿನ 20ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಭಾವಿ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಮೋಹನ್ ರಾವ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನವನ್ನು ವ್ಯವಸ್ಥಿತವಾಗಿ ನಡೆಸಲು ಸ್ವಾಗತ ಸಮಿತಿ ಮತ್ತು ವಿವಿಧ ಸಮಿತಿಗಳನ್ನು ರಚನೆ ಮಾಡಬೇಕಾಗಿದೆ. ಮಾಣಿಯಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಬಂಟ್ವಾಳ ತಾಲೂಕು ಸಾಹಿತ್ಯ ಕನ್ನಡ ಸಾಹಿತ್ಯ ಸಮ್ಮೆಳನದ ಯಶಸ್ವಿಗೆ ಎಲ್ಲರ ಸಹಕಾರ ಬೇಕಾಗಿದೆ ಎಂದರು.
ಪ್ರಮುಖರಾದ ನಾರಾಯಣ ಶೆಟ್ಟಿ ಕೊಂಬಿಲ, ಉದ್ಯಮಿ ಜಗನ್ನಾಥ ಚೌಟ, ನಿವೃತ ಶಿಕ್ಷಕ ಗಂಗಾಧರ ರೈ , ತುಂಬೆ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಗಂಗಾಧರ ಆಳ್ವ , ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೆ. ಇಬ್ರಾಹಿಂ ಮಾಣಿ, ಪ್ರೌಢ ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ , ಪೆರ್ನೆ ಶ್ರೀರಾಮಚಂದ್ರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ತಾರನಾಥ್ ಶೆಟ್ಟಿ, ಮೋಹನ್ ಪೆರ್ಲಾಪು ಕಡೇಶ್ವಾಲ್ಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರೇರಕಿ ಜಯಶ್ರೀ, ಮುಖ್ಯ ಶಿಕ್ಷಕಿ ವಿಜಯ ಲಕ್ಷ್ಮೀ, ಗ್ರೇಸ್ ಟಿ.ಸಲ್ಡಾನ ಉಪಸ್ಥಿತರಿದ್ದು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಬಂಟ್ವಾಳ ಕ.ಸಾ.ಪ ನಿಕಟ ಪೂರ್ವಾಧ್ಯಕ್ಷ ಜಯಾನಂದ ಪೆರಾಜೆ, ಗೌರವ ಕಾರ್ಯದರ್ಶಿ ಡಾ. ನಾಗವೇಣಿ ಮಂಚಿ, ಕನ್ನಡ ಭವನ ಕಟ್ಟಡ ಸಮಿತಿ ಸಂಚಾಲಕ ಗಂಗಾಧರ ಭಟ್ ಕೊಳಕೆ, ಸಿದ್ಧಕಟ್ಟೆ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ರಮಾನಂದ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷೆ ಪಲ್ಲವಿ ಕಾರಂತ , ನಿವೃತ್ತ ಶಿಕ್ಷಕ ಕೃಷ್ಣ ಶರ್ಮ, ನಿವೃತ ಪುರಸಭಾ ಅಧಿಕಾರಿ ಶಿವಶಂಕರ್ ನಂದಾವರ , ಗೀತಾ ಕೊಂಕೋಡಿ ಮೊದಲಾದವರು ಉಪಸ್ಥಿತರಿದ್ದರು.