ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 425 ಕ್ಕೆ ಏರಿಕೆ-ನಾಲ್ಕು ತಿಂಗಳ ಮಗುವಿಗೆ ಸೋಂಕು….
ಬೆಂಗಳೂರು: ರಾಜ್ಯದಲ್ಲಿ ಇಂದು ನಾಲ್ಕು ತಿಂಗಳ ಮಗು ಸೇರಿದಂತೆ ಹೊಸ ಏಳು ಕೋವಿಡ್-19 ಸೊಂಕು ಪ್ರಕರಣಗಳು ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದ ಸೋಂಕಿತರ ಸಂಖ್ಯೆ 425ಕ್ಕೆ ಏರಿಕೆಯಾಗಿದೆ.
ರಾಜ್ಯದ ಏಳು ಪ್ರಕರಣಗಳ ಪೈಕಿ ಐದು ಪ್ರಕರಣಗಳು ಕಲಬುರಗಿಯಿಂದಲೇ ದೃಢವಾಗಿದೆ. ಸೋಂಕಿತ ಸಂಖ್ಯೆ 329ರ ಸಂಪರ್ಕದಿಂದ ಮಗುವಿಗೆ ಸೋಂಕು ತಾಗಿದ್ದು, ಮಗುವಿನ ತಾಯಿ(26ವ)ಗೂ ಸೋಂಕು ದೃಢಪಟ್ಟಿದೆ.
ಇದೇ ಸೋಂಕಿತ ಸಂಖ್ಯೆ 329ರ ಸಂಪರ್ಕದಿಂದ 35 ವರ್ಷದ ಮಹಿಳೆಗೂ ಸೋಂಕು ದೃಢವಾಗಿದೆ.
ಕಲಬುರಗಿಯಲ್ಲಿ ಮತ್ತೆರಡು ಸೋಂಕು ಪ್ರಕರಣ ದೃಢವಾಗಿದ್ದು ಸೋಂಕಿತ ಸಂಖ್ಯೆ 222ರ ಸಂಪರ್ಕದಿಂದ 56 ವರ್ಷದ ಮಹಿಳೆಗೆ ಮತ್ತು ಉಸಿರಾಟದ ಸಮಸ್ಯೆ ಇರುವ 57 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಎರಡು ಪ್ರಕರಣಗಳ ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ ದೃಢವಾಗಿದೆ.54 ವರ್ಷದ ಪುರುಷ ಮತ್ತು 28 ವರ್ಷದ ಮಹಿಳೆಗೆ ಸೋಂಕು ಇರುವುದು ದೃಢವಾಗಿದೆ.