ಕೆಸಿಎಫ್ ನಿಝ್ವ ಝೋನ್ ಇಶ್ಕೇ ರಸೂಲ್ ﷺ ಮೀಲಾದ್ ಕಾನ್ಫರೆನ್ಸ್…

ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ನಿಝ್ವ ಝೋನ್ ವತಿಯಿಂದ ಇಶ್ಕೇ ರಸೂಲ್ ﷺ ಮೀಲಾದ್ ಕಾನ್ಫರೆನ್ಸ್ ಅ. 27 ರಂದು ಬುಧವಾರ ರಾತ್ರಿ ಅಲ್ ಖರೋಸಿ ಫಾರ್ಮ್ ಹಾಗೂ ಝೂಮ್ ನಲ್ಲಿ ಕೆಸಿಎಫ್ ನಿಝ್ವ ಝೋನ್ ಅಧ್ಯಕ್ಷರಾದ ಬಹು: ಕಲಂದರ್ ಬಾಷಾ ತೀರ್ಥಹಳ್ಳಿ ಇವರ ಅಧ್ಯಕತೆಯಲ್ಲಿ ಯಶಸ್ವಿಯಾಗಿ ನಡೆಯಿತು.
ಕೆಸಿಎಫ್ ನಿಝ್ವ ಝೋನ್ ಶಿಕ್ಷಣ ಅಧ್ಯಕ್ಷರು ಅಬ್ದುರ್ರಹ್ಮಾನ್ ಸಖಾಫಿ ಇವರು ದುಅ ನೆರವೇರಿಸಿ ಕೆಸಿಎಫ್ ನಿಝ್ವ ಝೋನ್ ಸಂಘಟನಾ ಕಾರ್ಯದರ್ಶಿ ಅಬ್ದುಲ್ ವಾರಿಸ್ ಮಣಿಪುರ ಸಭಿಕರನ್ನು ಸ್ವಾಗತಿಸಿದರು. ನಂತರ ಮುಜೀಬುರ್ರಹ್ಮಾನ್ ಮುಂಡೋತ್ ಐಸಿಎಫ್ ಒರ್ಗನೈಝೆಷನ್ ಸೆಕ್ರೆಟರಿ ನಿಝ್ವ ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಮೀಲಾದ್ ಕಾನ್ಫರೆನ್ಸ್ ಮುಖ್ಯ ಪ್ರಭಾಷಣ ಗಾರರಾಗಿ ಮೊಹಮ್ಮದ್ ಅಲಿ ಸಖಾಫಿ ಕಿನಾಲೂರ್ (ಐಸಿಎಫ್ ಒಮಾನ್ ನ್ಯಾಷನಲ್ ಎಕ್ಸಿಕ್ಯೂಟಿವ್)ರವರು ಪ್ರಭಾಷಣ ದ ನಂತರ ಮೌಲೂದ್ ಪಾರಾಯಣ ಮಾಡಿ ಅಶ್ರಕ ಬೈತ್ ನಲ್ಲಿ ಕೊನೆಗೊಳಿಸಿದರು. ಕೆಸಿಎಫ್ ಒಮಾನ್ ರಾಷ್ಟ್ರೀಯ ಅಧ್ಯಕ್ಷರು ಅಯ್ಯುಬ್ ಕೋಡಿ ಸಭಿಕರನ್ನು ಝೂಮ್ ಮೂಲಕ ಅಭಿನಂದಿಸಿದರು. ಕಾರ್ಯಕ್ರಮ ದಲ್ಲಿ ಕೆಸಿಎಫ್
ನಿಝ್ವ ಝೋನ್ ಸಾಂತ್ವಾನ ಹಾಗೂ ಇಹ್ಸಾನ್ ವಿಭಾಗದ ಅಧ್ಯಕ್ಷರು ಇಬ್ರಾಹಿಂ ಮಣಿಪುರ, ಕೆಸಿಎಫ್ ನಿಝ್ವ ಝೋನ್ ಶಿಕ್ಷಣ ಕಾರ್ಯದರ್ಶಿ ಸಾದಿಕ್ ಕೈಕಂಬ, ಫರ್ಕ್ ಸೆಕ್ಟರ್ ಅಧ್ಯಕ್ಷರು ಮೊಹಮ್ಮದ್ ಹುಸೈನ್ ತೀರ್ಥಹಳ್ಳಿ, ರಮೀಜ್ ಕಟಪಾಡಿ, ಇಬ್ರಾಹಿಂ ಅಡ್ಡೂರ್, Dr ಹನೀಫ್, ಹಮೀದ್ ಕಣ್ಣಂಗಾರ್, ಫೈಝಲ್ ಕಣ್ಣಂಗಾರ್, ಬಶೀರ್ ಮಣಿಪುರ, ಆಸಿಫ್ ಕಂಣ್ಣಗಾರ್, ಹನೀಫ್ ಮೂಡಬಿದ್ರೆ ಹಾಗೂ ಕೆಸಿಎಫ್ ನ ಕಾರ್ಯಕರ್ತರು ಹಾಗೂ ಹಿತೈಷಿಗಳು ಭಾಗ ವಹಿಸಿದ್ದರು.ಕೆಸಿಎಫ್ ನಿಝ್ವ ಝೋನ್ ಸಂಘಟನಾ ಅಧ್ಯಕ್ಷರು ಕಬೀರ್ ಮಿಸ್ಬಾಹಿ ಮಾಚಾರ್ ರವರು ವಂದಿಸಿ ಕೆಸಿಎಫ್ ಒಮಾನ್ ಇಹ್ಸಾನ್ ಕರ್ನಾಟಕ ಒರ್ಗನೈಝರ್ ಕಲಂದರ್ ಬಾವ ಕಾರ್ಯಕ್ರಮ ನಿರೂಪಿಸಿದರು.

B99141ad 9ad9 4e5e 8676 3dce209b8f38 300x225

Related Articles