ಡಾ. ವಾಮನ್ ರಾವ್ ಬೇಕಲ್ ಅವರಿಗೆ ಪ್ರತಿಷ್ಠಿತ “ಹೊಯ್ಸಳ ಪ್ರಶಸ್ತಿ ” 2025…

ಕಾಸರಗೋಡು : ಗಡಿನಾಡು ಕಾಸರಗೋಡಿನ ಕನ್ನಡ ಸೇವೆಗೆ, ಕನ್ನಡ ಭವನದ ರೂವಾರಿ ಡಾ. ವಾಮನ್ ರಾವ್ ಬೇಕಲ್ ಅವರಿಗೆ ಕರ್ನಾಟಕದ ಪ್ರತಿಷ್ಠಿತ “ಹೊಯ್ಸಳ ಪ್ರಶಸ್ತಿ ” 2025 ದೊರೆತಿದೆ .
ಮೈಸೂರಿನ ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗ, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಸಂಸ್ಥೆಯ 26ನೇ ವಾರ್ಷಿಕೋತ್ಸವ ಹಾಗೂ 2025ನೇ ಸಾಲಿನ “ಹೊಯ್ಸಳ ಪ್ರಶಸ್ತಿ “ಪ್ರದಾನ ಸಮಾರಂಭ ಏ.25 ರಂದು ನಡೆಯಿತು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಪುಸ್ತಕ ಪ್ರೇಮಿ ಅಂಕೆಗೌಡ ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಹಾಗೂ ಗಡಿನಾಡು ಕಾಸರಗೋಡಿನ ಕನ್ನಡ ಭವನ ಸಮೂಹ ಸಂಸ್ಥೆಗಳ ರೂವಾರಿ, ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಸಂಸ್ಥಾಪಕರೂ, ಕರ್ನಾಟಕದ ಸುಮಾರು 18 ಜಿಲ್ಲೆಗಳಲ್ಲಿ ಘಟಕಗಳನ್ನು ಸ್ಥಾಪಿಸಿ ಒಳನಾಡಿನಲ್ಲಿಯೂ ಕನ್ನಡ ಸೇವೆ ಮಾಡುತ್ತಿರುವ ಡಾ. ವಾಮನ್ ರಾವ್ ಬೇಕಲ್ (ಗಡಿನಾಡ ಕನ್ನಡ ಸೇವೆ ) ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ನಾಡು -ನುಡಿಗೆ ಅನುಪಮ ಸೇವೆ ಸಲ್ಲಿಸುತ್ತಿರುವ 15ಮಂದಿಗೆ ಹೊಯ್ಸಳ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೈಸೂರು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಡಾ. ವಿ. ಲಕ್ಷ್ಮಿ ನಾರಾಯಣ, ಡಾ. ಕೆ. ಲೀಲಾ ಪ್ರಸಾದ್ ಮುಖ್ಯ ಅತಿಥಿಗಳಾಗಿದ್ದರು. ನಾಡು ನುಡಿಗೆ ದುಡಿಯುತ್ತಿರುವ 15.ಮಂದಿ ಸಾಧಕರೀಗೆ 2025ನೇ ಸಾಲಿನ ಪ್ರತಿಷ್ಠಿತ ರಾಜ್ಯ ಮಟ್ಟದ “ಹೊಯ್ಸಳ ಪ್ರಶಸ್ತಿ “ಯನ್ನು ಮೈಸೂರು ಜಿಲ್ಲಾಧಿಕಾರಿ ಡಾ. ಪಿ ಶಿವರಾಜು ಹಾಗೂ ಹಿರಿಯ ಸಮಾಜ ಸೇವಕ ರಘುರಾಮ್ ವಾಜಪೇಯಿ ಪ್ರದಾನ ಮಾಡಿದರು. ಹೊಯ್ಸಳ ಕನ್ನಡ ಸಂಘ ಅಧ್ಯಕ್ಷರಾದ ರಂಗನಾಥ್ ಮೈಸೂರು ಸ್ವಾಗತಿಸಿ ಪ್ರಸ್ತಾವನೆ ಗೈದರು. ವಿಜಯಲಕ್ಷ್ಮಿ ರಂಗನಾಥ್ ಪ್ರಾರ್ಥನೆ ಗೈದರು. ಮಾನುಷ ನಿರೂಪಿಸಿದರು.

whatsapp image 2026 04 07 at 10.44.16 am (1)

Related Articles

Back to top button