ಸಂಧ್ಯಾರಾಣಿ ಟೀಚರ್ ಗೆ “ಉಡುಪಿ ಶ್ರೀಮಠದ ಕೃಷ್ಣಾನುಗ್ರಹ ಪ್ರಶಸ್ತಿ”…
ಕಾಸರಗೋಡು : ಗಡಿನಾಡು ಕಾಸರಗೋಡಿನ ಕನ್ನಡ ಭವನ, ಸಮೂಹ ಸಂಸ್ಥೆಗಳ ಮುಖ್ಯಸ್ಥೆ ಶ್ರೀಮತಿ ಸಂಧ್ಯಾರಾಣಿ ಟೀಚರ್ ಗೆ “ಉಡುಪಿ ಶ್ರೀಮಠದ ಕೃಷ್ಣಾನುಗ್ರಹ ಪ್ರಶಸ್ತಿ “2026 ಲಭಿಸಿದೆ .
ಪರ್ಯಾಯ ಶಿರೂರು ಮಠ, ಉಡುಪಿ ಶ್ರೀ ಕೃಷ್ಣ ಮಠ ಹಾಗೂ ಮಂಗಳೂರಿನ ಕಥಾಬಿಂದು ಪ್ರಕಾಶನ, ಕಥಾಬಿಂದು ಸಾಹಿತ್ಯ ವೇದಿಕೆ (ರಿ.) ರೂವಾರಿ ಪಿ. ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಇದೇ ಬರುವ ಏಪ್ರಿಲ್ 12ರಂದು ದಿನಪೂರ್ತಿ ನಡೆಯಲಿರುವ “ಕಥಾಬಿಂದು ಸಾಹಿತ್ಯ ಸಮ್ಮೇಳನ “2026. ಉಡುಪಿಯ ರಾಜಾಂಗಣದಲ್ಲಿ ನಡೆಯಲಿರುವುದು.
ಈ ವಿದ್ವತ್ ಕಾರ್ಯಕ್ರಮದಲ್ಲಿ ಗಡಿನಾಡು ಕಾಸರಗೋಡಿನ ಜನಪ್ರಿಯ ಕನ್ನಡ ಸೇವಾ ಸಂಸ್ಥೆಯಾದ ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯ (ರಿ. 223/2008),ಕನ್ನಡ ಭವನ ಪ್ರಕಾಶನ, ಕನ್ನಡ ಭವನ “ಉಚಿತ ವಸತಿ ಸೌಕರ್ಯ “, ಕನ್ನಡ ಭವನ ಉಚಿತ ಸಾರ್ವಜನಿಕ ವಾಚನಾಲಯ, ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್, ಕೇಂದ್ರ ಸಮಿತಿ, ಸ್ಥಾಪಕ ಸಂಚಾಲಕರೂ, ಸಾರಥಿಯೂ ಆಗಿ ಕಾರ್ಯ ನಿರ್ವಹಿಸುತ್ತಿರುವ, ಶ್ರೀಮತಿ ಸಂಧ್ಯಾರಾಣಿ ಟೀಚರ್ ಇವರೀಗೆ ಉಡುಪಿ ಶ್ರೀ ಕೃಷ್ಣ ಮಠದ ಗೌರವಾನ್ವಿತ, ಪೂಜ್ಯ “ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ “2026 ನೀಡಿ ಗೌರವಿಸಲಿದೆ.
ಶಿರೂರು ಮಠದ ಶ್ರೀ ಶ್ರೀ ವೇದವರ್ದನ ತೀರ್ಥ ಶ್ರೀಪಾದರು ಉದ್ಘಾಟಿಸಲಿರುವರು. ಮಾಜಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ, ಧರ್ಮದರ್ಶಿ, ಡಾ. ಹರಿಕೃಷ್ಣ ಪುನಃರೂರು ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿರುವುದು. ಶ್ರೀಪತಿ ಭಟ್, ಪ್ರದೀಪ್ ಕುಮಾರ್ ಕಲ್ಕೂರ, ಭುವನಾಬಿರಾಮ ಉಡುಪ, ಜಯಾನಂದ ಪೆರಾಜೆ, ಡಾ. ಕೊಲಚಪ್ಪೆ ಗೋವಿಂದ ಭಟ್, ಡಾ. ವಾಮನ್ ರಾವ್ ಬೇಕಲ್ ಮುಂತಾದವರಿರುವರು. ಎಂದು ಸಮ್ಮೇಳನ ಸರ್ವಾಧ್ಯಕ್ಷ ಪಿ. ವಿ. ಪ್ರದೀಪ್ ಕುಮಾರ್ ತಿಳಿಸಿದ್ದಾರೆ.
“ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ “ಸ್ವೀಕರಿಸಲಿರುವ ಶ್ರೀಮತಿ ಸಂಧ್ಯಾರಾಣಿ ಟೀಚರ್ ರಿಗೆ ಕನ್ನಡ ಭವನದ ಗೌರವ ಅಧ್ಯಕ್ಷರಾದ ಪ್ರದೀಪ್ ಬೇಕಲ್, ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್, ಕಾರ್ಯದರ್ಶಿ ವಸಂತ್ ಕೆರೆಮನೆ, ರಾಜೇಶ್ ಕೋಟೆಕಣಿ, ಮುಂತಾದ ಅನೇಕ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.





