ಮೊಜಂಟಿ ಜೇನು ಸಾಕಾಣಿಕೆ ಪರಿಸರ ಪ್ರಿಯರಿಗೆ ಉತ್ತಮ ಹವ್ಯಾಸ…

ಬಂಟ್ವಾಳ ಮಾ.19 : ಮೊಜಂಟಿ ಜೇನು ಸಾಕಾಣಿಕೆ ಉತ್ತಮ ಹವ್ಯಾಸವಾಗಿದ್ದು ಈ ಮೂಲಕ ಪರಿಸರ ಸಂರಕ್ಷಣಗೆ ವಿಶೇಷ ಕೊಡುಗೆಯನ್ನು ನೀಡಬಹುದು. ತಮ್ಮ ಮನೆಗಳಲ್ಲಿಯೇ ಎಷ್ಟು ಬೇಕಾದರೂ ಜೇನು ಪೆಟ್ಟಿಗೆಗಳನ್ನು ಇಡುವ ಮೂಲಕ ಸುಲಭವಾಗಿ ನಿರ್ವಹಣೆ ಮಾಡಬಹುದಾಗಿದೆ ಎಂದು ಬೆಳ್ತಂಗಡಿಯ ಚಿಂತನ ಹನಿ ಬೀ ಫಾರ್ಮ್ ನ ವ್ಯವಸ್ಥಾಪಕ ಅಶೋಕ್ ಕುಮಾರ್ ಗುಂಡೂರು ಹೇಳಿದರು.
ಅವರು ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದ ಕೊಕ್ಕಪುಣಿ ಎಂಬಲ್ಲಿ ರಾಕೋಡಿ ಈಶ್ವರ ಭಟ್ ಇವರ ಫಾರ್ಮ್ ಹೌಸ್‌ನಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಶಿಬಿರದಲ್ಲಿ ರಾಣಿ ನೊಣ ,ರಾಣಿಮೊಟ್ಟೆ , ಮೊಜಂಟಿ ಜೇನಿನ ತಳಿಗಳು, ಪಾಲು ಮಾಡುವ ವಿಧಾನ, ಮೊಜಂಟಿ ಜೇನು ತೆಗೆಯುವ ವಿಧಾನ, ಸಂಗ್ರಹಿಸುವ ವಿಧಾನಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ಶಿಬಿರಾರ್ಥಿಗಳಿಗೆ ತಿಳಿಸಿದರು.
ಶಿಬಿರವನ್ನು ಹಿರಿಯ ಜೇನು ಕೃಷಿಕ ರಾಕೋಡಿ ಈಶ್ವರ ಭಟ್ ಉದ್ಘಾಟಿಸಿದರು. ಎಸ್.ವಿ.ಎಸ್. ದೇವಳ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಜಯಾನಂದ ಪೆರಾಜೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಮುಖ ಜೇನು ಕೃಷಿಕರಾದ ಹರೀಶ್ ಕೋಡ್ಲ , ತೋಟಗಾರಿಕಾ ಸಹಾಯಕ ನಿರ್ದೇಶಕರಾದ ದಿನೇಶ್ , ಮಾಜಿ ಅಧಿಕಾರಿ ಬಾಲಕೃಷ್ಣ ಹೊಳ್ಳ, ಜೇನು ಮತ್ತು ರಬ್ಬರ್ ಸಹಕಾರಿ ಸಂಘದ ಉಪಾಧ್ಯಕ್ಷ ಮೋಹನ್ ಪಿ.ಎಸ್. , ಉದಯಶಂಕರ್ ಬೋಳಂತೂರು, ಶ್ರೀಕಾಂತ್ ಸುರುಳಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

whatsapp image 2025 03 19 at 5.33.31 pm

Sponsors

Related Articles

Back to top button