ನoದಾವರ ಚಿಕ್ಕ ಮೇಳದ ಮಳೆಗಾಲದ ಯಕ್ಷಗಾನ ತಿರುಗಾಟ ಆರಂಭ…

ಬಂಟ್ವಾಳ: ನoದಾವರ ಚಿಕ್ಕ ಮೇಳದ ಮಳೆಗಾಲದ ಐದನೇ ವರ್ಷದ ಮನೆ ಮನೆಗೆ ತಿರುಗಾಟ ಯಕ್ಷಗಾನ ಜೂ.10 ರಂದು ಆರಂಭಗೊಂಡಿತು.
ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ಕ್ಷೇತ್ರದಲ್ಲಿ ಗೆಜ್ಜೆಪೂಜೆ, ಪ್ರಥಮ ಸೇವೆ ಆಟದೊಂದಿಗೆ ಚಿಕ್ಕ ಮೇಳಕ್ಕೆ ಚಾಲನೆ ನೀಡಲಾಯಿತು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಅರ್ಚಕ ಉದಯ ಭಟ್, ಕೆಲಿಂಜ ಶ್ರೀ ಉಳ್ಳಾಲ್ದಿ ದೈವಸ್ಥಾನದ ಆಡಳಿತ ಮೊಕ್ತೇಸರ ಪುಂಡಿಕಾಯಿ ಶಂಕರನಾರಾಯಣ ಭಟ್, ಶ್ರೀ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯರಾದ ಅರುಣ್ ಕುಮಾರ್ ಕೆ, ಮೋಹನ ದಾಸ್ ಹೆಗ್ಡೆ ಕೆ, ಮ್ಯಾನೇಜರ್ ರಾಮಕೃಷ್ಣ, ರಮೇಶ್ ಕುಮಾರ್, ಸೋಮನಾಥ ಚಿಕ್ಕಮೇಳದ ಸಂಚಾಲಕ ಭಾಸ್ಕರ್ ಸರಪಾಡಿ, ಕಲಾವಿದರಾದ ಶಿವಪ್ರಸಾದ್ ಕಾವಲಕಟ್ಟೆ,
ಕಾರ್ತಿಕ್ ಸರಪಾಡಿ, ಸಂದೀಪ ಕುಲಾಲ್, ಶಿವಪ್ರಸಾದ್ ಕುರಾಯ, ಶಿವಪ್ರಸಾದ್ ಆಚಾರ್ಯ, ಧನಂಜಯ ಸರಪಾಡಿ ಮೊದಲಾದವರು ಉಪಸ್ಥಿತರಿದ್ದರು.