ದೇಶದ ವಿಚಾರ ಧಾರೆಯನ್ನು ಇಟ್ಟುಕೊಂಡು ಬೆಳೆದ ಪಕ್ಷ ಬಿಜೆಪಿ- ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲು…..
ಬಂಟ್ವಾಳ: ಸಂಘದ ಮೂಲಕ ಸಾರ್ವಜನಿಕ ಜೀವನದ ಸಚ್ಚಾರಿತ್ಯದಿಂದ ಸಾಮಾನ್ಯ ವ್ಯಕ್ತಿಯೊಬ್ಬ ಉನ್ನತಿಗೆ ಏರುವುದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ವಂಶಾಡಳಿತ, ಜಾತಿ ರಾಜಕಾರಣ ಬದಿಗಿಟ್ಟು ದೇಶದ ವಿಚಾರ ಧಾರೆಯನ್ನು ಇಟ್ಟುಕೊಂಡು ಬೆಳೆದ ಪಕ್ಷ ನಮ್ಮದು ಎಂದು ಬಿಜೆಪಿ ರಾಜಾಧ್ಯಕ್ಷ , ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ಸೆ. 20ರಂದು ಬಿ. ಸಿ.ರೋಡ್ ರಂಗೋಲಿ ಸಭಾಂಗಣದಲ್ಲಿ ಪಕ್ಷದ ವತಿಯಿಂದ ನಡೆದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ವಿಶ್ವದಲ್ಲಿ ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ ದೊಡ್ಡ ಪಕ್ಷದ ಸದಸ್ಯ ನಾನು. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೇರಳದಲ್ಲಿ ಬಿಜೆಪಿ ಬೂತ್ ಮಟ್ಟದ ಅಧ್ಯಕ್ಷರ ಮನೆಯಲ್ಲಿ ಮೀಟಿಂಗ್ ಮಾಡುವ ಮೂಲಕ ಸರಳತೆಗೆ ಉದಾಹರಣೆ ನೀಡಿದ್ದಾರೆ. ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು ಎಂಬ ಚಿಂತನೆ ನಮ್ಮದಾಗಿದೆ. ಬಂಟ್ವಾಳ ನನಗೆ ಆನೇಕ ಆದರ್ಶಗಳನ್ನು ತಿಳಿಸಿಕೊಟ್ಟಿದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಎಲ್ಲಿದೆ. ವಿಧಾನ ಸಭೆಯಲ್ಲಿ ಪ್ರತಿಪಕ್ಷ ನಾಯಕತ್ವವನ್ನೇ ಇದುವರೆಗೆ ಮಾಡಲಾಗದ ಪಕ್ಷ ರಾಜ್ಯದ ಅಭಿವೃದ್ದಿಗೆ ಎನೂ ಮಾಡಿಲ್ಲ. ಬಿ.ಯಸ್. ಯಡಿಯೂರಪ್ಪ ಅಧಿಕಾರ ಸ್ವೀಕರಿಸುವ ಹೊತ್ತಿಗೆ ರಾಜ್ಯದ ಖಜಾನೆ ಬರಿದಾಗಿತ್ತು. ಆದರೂ ಮುತ್ಸದಿ ಮುಖ್ಯಮಂತ್ರಿಗಳು ಆಡಳಿತವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಆರ್ಥಿಕವಾಗಿ ಅಭಿವೃದ್ದಿಯ ಚಿಂತನೆ ನಡೆಸಿದ್ದಾರೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು ಮಾತನಾಡಿ ನಳಿನ್ ಕುಮಾರ್ ಸಾಮಾನ್ಯ ಮಟ್ಟದಿಂದ ಉನ್ನತ ಮಟ್ಟಕ್ಕೆ ಏರಿದ್ದಾರೆ. ಅಂದಿನ ಅದೇ ಸರಳತೆಯನ್ನು ಇಂದಿಗೂ ಉಳಿಸಿಕೊಂಡಿದ್ದಾರೆ. ಒಬ್ಬ ರಾಜ್ಯಾಧ್ಯಕ್ಷನಾದರೂ ಜನ ಸಾಮಾನ್ಯರಿಗೆ ಅವರನ್ನು ಭೇಟಿ ಮಾಡಲು ಸಾಧ್ಯವಾಗುವಂತೆ ಅವರ ಚಿಂತನೆಗಳಿವೆ ಎಂದರು.
ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಸಭಾಧ್ಯಕ್ಷ ಸ್ಥಾನದಿಂದ ಮಾತನಾಡಿ, ಸ್ವಷ್ಟ ಮಾತು, ನೇರ ನಡೆ ನುಡಿ, ದೃತಿಗೇಡದ ವ್ಯಕ್ತಿತ್ವ, ಮನೆಗಿಂತಲೂ ಹೆಚ್ಚು ಪಕ್ಷದ ಕಚೇರಿಯಲ್ಲಿ ಸಿಗುವ ಸಂಸದರಾಗಿ ನಳಿನ್ ಕುಮಾರ ಕಟೀಲು ಒಬ್ಬ ಸರಳವಾದ ಜೀವನ ಸಾಧನೆ ಹೊಂದಿದವರು. ಕೆಲಸದಲ್ಲಿ ರಾಜ್ಯದ ನಂಬರ್‍ವನ್ ಸಂಸದರೆಂಬ ಕೀರ್ತಿ ಪಡೆದವರು. ಪಕ್ಷದ ಕೆಲಸದ ವಿಚಾರದಲ್ಲಿ ಬೂತ್ ಮಟ್ಟಕ್ಕೆ ಬಂದು ಮತದಾರನ ಜೊತೆಗಿದ್ದವರು ಎಂದು ಅಭಿನಂದಿಸಿ ಮಾತನಾಡಿದರು.
ವೇದಿಕೆಯಲ್ಲಿ ಮಂಗಳೂರು ವಿಭಾಗ ಪ್ರಭಾರಿ ಹಾಗೂ ಸಹಪ್ರಭಾರಿಗಳಾದ ಉದಯ್ ಕುಮಾರ್ ಶೆಟ್ಟಿ, ಗೋಪಾಲಕೃಷ್ಣ ಹೇರಳೆ, ಜಿಲ್ಲಾ ಬಿಜೆಪಿ ವಕ್ತಾರ ಕೆ. ಹರಿಕೃಷ್ಣ ಬಂಟ್ವಾಳ್, ಕಿಶೋರ್ ರೈ, ಬ್ರಿಜೇಶ್ ಚೌಟ, ಮಾಜಿ ಶಾಸಕರುಗಳಾದ ಎ. ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ರಾಜ್ಯ ಬಿಜೆಪಿ ಸಹ ವಕ್ತಾರೆ ಸುಲೋಚನಾ ಜಿ. ಕೆ. ಭಟ್, ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ, ಬಂಟ್ವಾಳ ಬಿಜೆಪಿ ಮಾಜಿ ಅಧ್ಯಕ್ಷ ಜಿ. ಆನಂದ, ಡಾ| ಅರವಿಂದ ಉಪಸ್ಥಿತರಿದ್ದರು.
ಕ್ಷೇತ್ರ ಅಧ್ಯಕ್ಷರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ದೇವಪ್ಪ ಪೂಜಾರಿ ವಂದಿಸಿದರು. ರಾಮ್‍ದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ ಕಾರ್ಯಕ್ರಮ ನಿರ್ವಹಿಸಿದರು.