ಬಂಟ್ವಾಳ ನೇತ್ರಾವತಿ ಸಂಗಮ ಉದ್ಘಾಟನೆ…
ಬಂಟ್ವಾಳ : ಜೇಸಿಐ ಸಂಸ್ಥೆಯಲ್ಲಿ ಸಾಧನೆ ಮಾಡಿದ ಜೇಸಿಗಳು ನಿಷ್ಕ್ರಿಯರಾಗದೆ ಅಂತರಾಷ್ಟ್ರೀಯ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆಯಲ್ಲಿ ಸೇವಾಕಾರ್ಯಗಳನ್ನು ಮುಂದುವರಿಸಬೇಕು. ಹಿರಿಯ ನಾಗರಿಕರಾಗಿ ಸಮಾಜಕ್ಕೆ ಮಾರ್ಗದರ್ಶನ ಮಾಡುವ ಮೂಲಕ ಕ್ರಿಯಾಶೀಲರಾಗಬೇಕು ಎಂದು ಎಸ್.ಸಿ.ಐ ಸಂಸ್ಥೆಯ ರಾಷ್ಟ್ರಾಧ್ಯಕ್ಷ ಕೇದಿಗೆ ಅರವಿಂದ ರಾವ್ ಹೇಳಿದರು.
ಅವರು ಬಿ.ಸಿ.ರೋಡಿನ ಪದ್ಮಾ ಕಾಂಪ್ಲೆಕ್ಸ್ ನಲ್ಲಿ ಶನಿವಾರ ಹಿರಿಯ ಜೇಸಿಗಳ ಬಂಟ್ವಾಳ ನೇತ್ರಾವತಿ ಸಂಗಮ ನೂತನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಸಾರ್ವಜನಿಕ ಸಂಪರ್ಕ ಸಮಿತಿಯ ವಲಯಾಧಿಕಾರಿ ಜಯಪ್ರಕಾಶ್ ರಾವ್ ಪುತ್ತೂರು ಮುಖ್ಯಅತಿಥಿಯಾಗಿ ಮಾತನಾಡಿ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಆದರ್ಶ ವ್ಯಕ್ತಿತ್ವ ಅನುಕರಣೀಯವಾಗಿದೆ. ಜೇಸಿ ಸಂಸ್ಥೆಯು ವ್ಯಕ್ತಿತ್ವ ನಿರ್ಮಾಣ ಕಾರ್ಯದ ಮೂಲಕ ದೇಶಕ್ಕೆ ಉತ್ತಮ ನಾಯಕರನ್ನು ನೀಡುತ್ತಿದೆ ಎಂದು ಶುಭ ಹಾರೈಸಿದರು.
ಎಸ್.ಸಿ.ಐ. ರಾಷ್ಟ್ರೀಯ ನಿರ್ದೇಶಕ ಚಿತ್ರ ಕುಮಾರ್ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ರಾಜ್ಯ ವಿಸ್ತರಣಾಧಿಕಾರಿ ನವೀನ್ ಅಮೀನ್ ಶುಭ ಹಾರೈಸಿದರು. ಬಂಟ್ವಾಳ ನೇತ್ರಾವತಿ ಸಂಗಮದ ಅಧ್ಯಕ್ಷರಾಗಿ ಜೇಸಿಐ ರಾಜ್ಯ ತರಬೇತುದಾರ ಜಯಾನಂದ ಪೆರಾಜೆ ಸ್ಥಾಪಕ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಎಸ್.ಆರ್.ಪಟವರ್ಧನ್, ಕಾರ್ಯದರ್ಶಿಯಾಗಿ ಸತ್ಯನಾರಾಯಣ ರಾವ್, ಕೋಶಾಧಿಕಾರಿಯಾಗಿ ಬಿ.ಆರ್. ರಾವ್, ಜೊತೆ ಕಾರ್ಯದರ್ಶಿಯಾಗಿ ಪಿ. ಮಹಮ್ಮದ್ ಪ್ರಮಾಣ ವಚನ ಸ್ವೀಕರಿಸಿದರು. ಮಂಗಳೂರು ಘಟಕದ ಅಧ್ಯಕ್ಷ ಹರಿಪ್ರಸಾದ್ ರೈ ಸಭಾಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶಾಲಿನಿ ಪ್ರಶಾಂತ್ ಉಪಸ್ಥಿತರಿದ್ದರು.
ಪ್ರೊ. ವೃಷಭರಾಜ್ ಜೈನ್, ಮಹಾಬಲೇಶ್ವರ ಹೆಬ್ಬಾರ್ , ಬಿ.ರಾಮಚಂದ್ರ ರಾವ್ ,ನ್ಯಾಯವಾದಿ ಉಮೇಶ್ ಏಣಾಜೆ ,ರಾಧಾಕೃಷ್ಣ ಬಂಟ್ವಾಳ, ಜೇಸಿ ಅಧ್ಯಕ್ಷ ಹರಿಪ್ರಸಾದ್ ಶುಭ ಹಾರೈಸಿದರು. ಅಹಮ್ಮದ್ ಮುಸ್ತಾಫ ವಂದಿಸಿದರು.