ಮುಸ್ಲೀಂ ಲೀಗ್ ನ ನೂತನ ಅಧ್ಯಕ್ಷರಿಗೆ ಟಿ ಎಂ ಶಾಹೀದ್ ತೆಕ್ಕಿಲ್ ಅಭಿನಂದನೆ…

ಸುಳ್ಯ: ಮುಸ್ಲೀಂ ಲೀಗ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪಾನಕ್ಕಾಡ್ ಸಾದಿಕ್ ಅಲಿ ಶಿಹಾಬ್ ತಂಙಳರವರನ್ನು ಪಾನಕ್ಕಾಡಿನಲ್ಲಿ ಕಾಂಗ್ರೆಸ್ ಮುಖಂಡ ಟಿ ಎಂ ಶಾಹೀದ್ ತೆಕ್ಕಿಲ್ ರವರು ಅಭಿನಂದಿಸಿದರು.
ಕರ್ನಾಟಕದ ಜೊತೆ ಹೆಚ್ಚು ಸಂಪರ್ಕ ಮತ್ತು ಅಭಿಮಾನಿಗಳು ಇರುವುದರಿಂದ ತಂಙಳರವರ ನೇಮಕ ಮುಂದಿನ ಕರ್ನಾಟಕದ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಈ ವೇಳೆ ಸಿದ್ದೀಕ್ ಕೋಕೋ, ಆರ್ ಕೆ ಮಹಮದ್ ಮತ್ತಿತರು ಹಾಜರಿದ್ದರು.