ಎಸ್ ಎಸ್ ಎಫ್ ಸುಳ್ಯ- ‘ ಶಿರವಸ್ತ್ರ: ಅದು ನಮ್ಮ ಹಕ್ಕು’ ಕಾರ್ಯಕ್ರಮ…

ಸುಳ್ಯ: ಎಸ್ ಎಸ್ ಎಫ್ ಸುಳ್ಯ,ಅಜ್ಜಾವರ ಹಾಗೂ ಜಾಲ್ಸೂರ್ ಸೆಕ್ಟರ್ ಕ್ಯಾಂಪಸ್ ಚೇಂಬರ್ ವತಿಯಿಂದ ‘ಶಿರವಸ್ತ್ರ: ಅದು ನಮ್ಮ ಹಕ್ಕು’ ಎಂಬ ವಿಶೇಷ ಕಾರ್ಯಕ್ರಮ SSF ಸುಳ್ಯ ಸೆಕ್ಟರ್ ಅಧ್ಯಕ್ಷರಾದ ಬಶೀರ್ ಕಲ್ಲುಮುಟ್ಲು ರವರ ಅಧ್ಯಕ್ಷತೆಯಲ್ಲಿ ಸುನ್ನೀ ಸೆಂಟರ್ ಸುಳ್ಯದಲ್ಲಿ ನಡೆಯಿತು.
SSF ಗಾಂಧಿನಗರ ಶಾಖೆಯ ಪ್ರಧಾನ ಕಾರ್ಯದರ್ಶಿ ಆರಿಫ್ ಬುಶ್ರಾ ಉದ್ಘಾಟಿಸಿದರು. SSF ಸುಳ್ಯ ಡಿವಿಶನ್ ಕ್ಯಾಂಪಸ್ ಕಾರ್ಯದರ್ಶಿ ಸ್ವಾದಿಕ್ ಮಾಸ್ಟರ್ ತರಬೇತಿ ನೀಡಿದರು.
ರಾಷ್ಟ್ರೀಯ ಸಾಹಿತ್ಯೋತ್ಸವದಲ್ಲಿ ರಾಜ್ಯ ಕ್ವಿಝ್ ನಲ್ಲಿ ದ್ವಿತೀಯ ಸ್ಥಾನ ಪಡೆದ ಸೆಲೀಕ್ ಕಲ್ಲುಗುಂಡಿಯವರಿಗೆ ಸನ್ಮಾನಿಸಲಾಯಿತು.
ಅತಿಥಿಗಳಾಗಿ ಎಸ್ ವೈ ಎಸ್ ಗಾಂಧಿನಗರ ಬ್ರಾಂಚ್ ಅಧ್ಯಕ್ಷರಾದ ಸಿದ್ದೀಕ್ ಕಟ್ಟೆಕ್ಕಾರ್, ಎಸ್ ವೈ ಎಸ್ ಗಾಂಧಿನಗರ ಬ್ರಾಂಚ್ ಪ್ರ. ಕಾರ್ಯದರ್ಶಿ ಆರಿಸ್ ಬೋರುಗುಡ್ಡೆ ಹಾಗೂ ಎಸ್ ಎಸ್ ಎಫ್ ಸುಳ್ಯ ಡಿವಿಷನ್ ಮೀಡಿಯಾ ಕಾರ್ಯದರ್ಶಿ ಸಿದ್ದೀಕ್ ಬಿ ಎ ಉಪಸ್ಥಿತರಿದ್ದರು. SSF ಕಲ್ಲುಗುಂಡಿ ಶಾಖೆಯ ಪ್ರಧಾನ ಕಾರ್ಯದರ್ಶಿ ಸೆಲೀಕ್ ಕಲ್ಲುಗುಂಡಿ ಸ್ವಾಗತಿಸಿ, SSF ಸುಳ್ಯ ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಇಜಾಝ್ ಗೂನಡ್ಕ ವಂದಿಸಿದರು.

Sponsors

Related Articles

Back to top button