ದಾವಣಗೆರೆ ವಾರ್ಡ್ ನಂಬ್ರ ಎಂಟರಲ್ಲಿ ಸಾವಿರಕ್ಕೂ ಮಿಕ್ಕಿ ಮತದಾರರನ್ನ ನೇರವಾಗಿ ಭೇಟಿಯಾದ ಕೆಪಿಸಿಸಿ ಉಸ್ತುವಾರಿ ಟಿ ಎಂ ಶಾಹಿದ್ ತೆಕ್ಕಿಲ್…
ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಉಸ್ತುವಾರಿ ವಾರ್ಡಿನಲ್ಲಿ ಒಂದು ಸಾವಿರಕ್ಕೂ ಮಿಕ್ಕಿ ಮತದಾರರನ್ನು ನೇರ ಭೇಟಿ ನೀಡಿ ಎಲ್ಲ ವರ್ಗದ ಜನರಿಗೆ ಸಿದ್ದರಾಮಯ್ಯ ಸರಕಾರ ನೀಡುತ್ತಿರುವ ಗ್ಯಾರಂಟಿ ಮತ್ತು ಬಿಜೆಪಿ ಪಕ್ಷ ಮಾಡುತ್ತಿರುವ ಅಪ ಪ್ರಚಾರವನ್ನು ವಿವರಿಸಿದರು.
ಮತದಾರರು, ಸಾಮಾನ್ಯ ಜನರು ಇಂದು ಅನುಭವಿಸುತ್ತಿರುವ ಗ್ಯಾಸ್, ಪೆಟ್ರೋಲ್, ಯೂರಿಯ, ಆಕ್ಸಿಜನ್ ಸಮಸ್ಯೆ, ಹಣ ದುಬ್ಬರ ಎಲ್ಲದಕ್ಕೂ ನೇರವಾಗಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ನೇರ ಹೊಣೆ ಎಂದ ಅವರು ಮಹಿಳೆಯರ ಮತ್ತು ಯುವಕರ ಸಮಸ್ಯೆ ಉಲ್ಬಣಕ್ಕೆ, ನಿರುದ್ಯೋಗ ಸಮಸ್ಯೆಗೆ ಪರಿಹಾರ ಆಗಿಲ್ಲ ಎಂದು ವಿವರಿಸಿದರು. ಕುಣಿಗಲ್ ಶಾಸಕ ಡಾಕ್ಟರ್ ಕೆ ಎಚ್ ರಂಗನಾಥ್. ಸ್ಥಳೀಯ ಮಾಜಿ ಕಾರ್ಪೋರೇಟರ್ ಚಂದ್ರು. ಮಾಜಿ ಮೇಯರ್ ವಿನಾಯಕ. ಸ್ಥಳೀಯ ಮುಖಂಡರಾದ ಶಿವಾಜಿ ಸಿದ್ದಪ್ಪ, ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು.







