ಸರ್ವೋದಯ ಫ್ರೆಂಡ್ಸ್ ಮೂಡುಬಿದಿರೆ -ಕ್ರಿಕೆಟ್ ಪಂದ್ಯಾಟ…
ಮೂಡುಬಿದಿರೆ: ಸರ್ವೋದಯ ಫ್ರೆಂಡ್ಸ್ ಮೂಡುಬಿದಿರೆ ಇದರ ವತಿಯಿಂದ ನಡೆದ 20 ಓವರ್ ಗಳ ಕ್ರಿಕೆಟ್ ಪಂದ್ಯಾಟದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷರಾದ ಶ್ರೀ ಪ್ರಸಾದ್ ಕುಮಾರ್ ಭಾಗವಹಿಸಿದರು.
ಈ ಪಂದ್ಯಾಟದಲ್ಲಿ ಮೊದಲನೇ ಬಹುಮಾನವನ್ನು FCT ಪುತ್ತಿಗೆ ತಂಡವು, ಎರಡನೆಯ ಬಹುಮಾನವನ್ನು ಮಾರಿಗುಡಿ ಫ್ರೆಂಡ್ಸ್ ಮೂಡುಬಿದರೆ ತಂಡವು ಪಡೆದಿರುತ್ತದೆ.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ರಾಜೇಶ್ ನಾಯ್ಕ್, ಕ್ರಿಕೆಟ್ ಯೂನಿಯನ್ ಅಧ್ಯಕ್ಷರಾದ ಅಶ್ರಫ್ ವಾಲ್ಪಾಡಿ, ಪ್ರಮುಖರಾದ ಹರೀಶ್, ಸತೀಶ್, ರಾಜೇಶ್ P S, ಗುರು, ನವೀನ್, ಗಣೇಶ್, ಸುರೇಶ್, ಮನೋಜ್, ದೇಜಪ್ಪ, ಹಾಗೂ ಕ್ರೀಡಾಪಟುಗಳು ಮೊದಲಾದವರು ಉಪಸ್ಥಿತರಿದ್ದರು.