ಲಾಕ್‌ಡೌನ್ ಮುಂದುವರಿದಲ್ಲಿ ಸರಕಾರದಿಂದ ಆಹಾರದ ಕಿಟ್ ನೀಡುವಂತೆ ರಿಯಾಝ್ ಕಟ್ಟೆಕ್ಕಾರ್ ಮನವಿ….
ಸುಳ್ಯ: ಕೊರೊನಾ ವೈರಸ್ ದೇಶದಾದ್ಯಂತ ಹರಡುತ್ತಿರುವ ಹಿನ್ನೆಲೆ ಲಾಕ್‌ಡೌನ್ ಮುಂದುವರಿಯುವ ಸಾಧ್ಯತೆಯಿದೆ. ಹೀಗಾಗಿ ರಾಜ್ಯದ ಬಡ ಹಾಗೂ ಮಧ್ಯಮ ವರ್ಗ ಕುಟುಂಬಗಳು ಬಾರೀ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಹೀಗಾಗಿ ಸರಕಾರ ಇಂತಹ ಕುಟುಂಬಗಳನ್ನು ಗುರುತಿಸಿ ಪಂಚಾಯತ್ ಮೂಲಕ 5000ರೂ. ಮೊತ್ತದ ಆಹಾರ ಸಾಮಾಗ್ರಿಗಳನ್ನು ನೀಡಬೇಕು.
ಇದರಿಂದ ಇಂತಹ ಕುಟುಂಬಗಳಲ್ಲಿ ಹಸಿವಿನ ಆತಂಕ ಕಡಿಮೆಯಾಗುತ್ತದೆ. ಅಲ್ಲದೆ ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಆದ್ದರಿಂದ ಸರಕಾರ ಶೀಘ್ರ ಈ ವ್ಯವಸ್ಥೆಯನ್ನು ಜಾರಿ ಮಾಡಬೇಕು ಎಂದು ಸುಳ್ಯ ನಗರ ಪಂಚಾಯತ್ ಸದಸ್ಯ ರಿಯಾಝ್ ಕಟ್ಟೆಕ್ಕಾರ್ ಮನವಿ ಮಾಡಿದ್ದಾರೆ.