ಅಡ್ಯಾರ್ ಪದವು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹ್ಯಾದ್ರಿ ಕಾಲೇಜು ವತಿಯಿಂದ ವಾಟರ್ ಬೆಲ್ ಜಾಗೃತಿ ಕಾರ್ಯಕ್ರಮ….
ಮಂಗಳೂರು: ಅಡ್ಯಾರ್ ಪದವು ಸರಕಾರಿ ಪ್ರಾಥಮಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉನ್ನತ್ ಭಾರತ್ ಅಭಿಯಾನ್ ಯೋಜನೆಯಡಿಯಲ್ಲಿ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ವತಿಯಿಂದ ಉಚಿತ ನೀರಿನ ಬಾಟಲಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ನೀರು ಕುಡಿಯುವುದರ ಮಹತ್ವದ ಬಗ್ಗೆ ವೀಡಿಯೊಗಳನ್ನು ತೋರಿಸಲಾಯಿತು ಮತ್ತು ಮೋಜಿನ ಕಲಿಕಾ ಚಟುವಟಿಕೆಗಳನ್ನು ನಡೆಸಲಾಯಿತು.
ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀನಿವಾಸ ರಾವ್‍ಕುಂಟೆ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರತಿದಿನ ನೀರು ಕುಡಿಯುವ ಅಭ್ಯಾಸವನ್ನು ಬೆಳೆಸುವಂತೆ ಕರೆ ನೀಡಿದರು. ಕಾಲೇಜಿನ ಡೀನ್-ಅಕಾಡೆಮಿಕ್ಸ್ ಡಾ. ರಾಜೇಶ್ ಎಸ್ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿ, ವಿದ್ಯಾರ್ಥಿಗಳು ಸದೃಡವಾಗಿರಲು ನೀರು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ವಿವರಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ನೀರಿನ ಜಾಗೃತಿ ಉಪಕ್ರಮವನ್ನು ಶ್ಲಾಘಿಸಿದರು ಮತ್ತು ಸಹ್ಯಾದ್ರಿ ಆಡಳಿತ ಮಂಡಳಿಗೆ ಧನ್ಯವಾದ ಅರ್ಪಿಸಿದರು.
ಅಕಾಡೆಮಿಕ್ಸ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಶ್ರೀಲತಾ ಯು.ಎ., ಡೀನ್-ಇಂಡಸ್ಟ್ರಿ ಕನೆಕ್ಟ್ ಡಾ.ರವಿಚಂದ್ರ ಕೆ.ಆರ್, ಡೀನ್-ಸ್ಟ್ರಾಟೆಜಿಕ್ ಪ್ಲಾನಿಂಗ್ ಪ್ರೊ.ರಮೇಶ್ ಕೆ ಜಿ, ಡಾ.ವಿಶ್ವವತಿ, ಡಾ.ರಾಜೇಶ್, ಸುಸೀತ್ರಾ, ವಿದ್ಯಾರ್ಥಿ ಕ್ಷೇಮಾಧಿಕಾರಿ ರಶ್ಮಿತಾ,ಗಿರೀಶ್, ನಿಶಾಲ್ ಮತ್ತು ಅಂಕಿತ್ ಎಸ್ ಕುಮಾರ್ ಉಪಸ್ಥಿತರಿದ್ದರು.
ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಡಾ.ರತಿಶ್ಚಂದ್ರ ಗಟ್ಟಿ ಮತ್ತು ಸಂಶೋಧನಾ ವಿಭಾಗದ ಸಂಶೋಧನಾ ಸಹಾಯಕಿ ಎಂ.ಎಸ್.ಮಮಥಾ ಅವರು ಕಾರ್ಯಕ್ರಮವನ್ನು ಸಂಯೋಜಿಸಿದರು.