ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಂಜಲ್ ಪಾದೆ-ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ…

ಬಂಟ್ವಾಳ: ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಂಜಲ್ ಪಾದೆ ಇದರ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ ಭಾನುವಾರದಂದು ದೇವಸ್ಥಾನದ ಸಭಾಭವನದಲ್ಲಿ ಜರಗಿತು.
ಜೂನ್ 2 ,3 ಮತ್ತು 4 ರಂದು ಬ್ರಹ್ಮಶ್ರೀ ನೀಲೇಶ್ವರ ಕೆ.ಯು ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಆಗಮೋಕ್ತವಾಗಿ ಶಾಸ್ತ್ರೋಕ್ತವಾಗಿ ತಾಂತ್ರಿಕ ವಿಧಿವಿಧಾನಗಳೊಂದಿಗೆ ಶ್ರದ್ಧಾಭಕ್ತಿಯಿಂದ ಜರಗಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹರಿಕಥಾ ಕಾಲಕ್ಷೇಪ, ಯಕ್ಷಗಾನ ತಾಳಮದ್ದಳೆ, ಯಕ್ಷ ಭಜನೆ, ವಿವಿಧ ಭಜನಾ ತಂಡಗಳಿಂದ ನಾಮ ಸಂಕೀರ್ತನೆ, ಅನ್ನದಾನ ಮೊದಲಾದ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣ ಶಾಮ್. ಎಂ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಂ ಸುಬ್ರಹ್ಮಣ್ಯ ಭಟ್, ಸ್ವಾಗತ ಸಮಿತಿ ಅಧ್ಯಕ್ಷ ಅದೃಕ್ಕು ಜಯಶಂಕರ ಬಾಸ್ರಿತಾಯ, ಎಂ ಸೂರ್ಯನಾರಾಯಣ ಭಟ್, ಬಿ ಕೇಶವ ಭಟ್, ಗಿತೇಶ್ ಗಟ್ಟಿ, ಸಂತೋಷ್, ಕುಸುಮ, ಪ್ರಮೀಳಾ ಗಟ್ಟಿ, ಗಣೇಶ್ ಕುಲಾಲ್, ಮನೋಜ್ ಆಳ್ವ, ಸೇಸ ಮೂಲ್ಯ, ಚಂದ್ರಶೇಖರ್, ವಿಶ್ವನಾಥ್ ಕೊಟ್ಟಾರಿ, ದಿನೇಶ್ ಮಯ್ಯ, ಯಶವಂತ ಗಟ್ಟಿ, ವಾಸು ಗಟ್ಟಿ ಮೊದಲಾದ ವಿವಿಧ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.