ಶ್ರೀರಾಮ ಶಿಶು ಮಂದಿರ – ವಿದ್ಯಾರಂಭ ಕಾರ್ಯಕ್ರಮ…

ಬಂಟ್ವಾಳ: ಶ್ರೀರಾಮ ಶಿಶು ಮಂದಿರದ ವತಿಯಿಂದ ನವರಾತ್ರಿಯ ವಿಜಯದಶಮಿ ದಿನದಂದು ವೇದವ್ಯಾಸ ಧ್ಯಾನಮಂದಿರದಲ್ಲಿ ವಿದ್ಯಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸರಸ್ವತಿ ಹೋಮದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಒಡಿಯೂರು ಕ್ಷೇತ್ರದ ಪರಮ ಪೂಜನೀಯ ಸಾಧ್ವಿ ಮಾತನಂದಮಯಿಯವರು ಶ್ರೀರಾಮ ವಿದ್ಯಾಕೇಂದ್ರದ ಆಶ್ರಯದಲ್ಲಿ ನಡೆಯುವಂತಹ 5 ಶಿಶುಮಂದಿರಗಳ ಒಟ್ಟು 52 ಮಕ್ಕಳಿಗೆ ಮಗುವಿನ ಕೈಯಲ್ಲಿ ಅರಶಿನ ಕೊಂಬನ್ನು ಹಿಡಿದು ಹರಿವಾಣದಲ್ಲಿ ಅಕ್ಕಿಯ ಮೇಲೆ ಅಕ್ಷರಗಳನ್ನು ಬರೆಸುವುದರ ಮೂಲಕ ಅಕ್ಷರಾಭ್ಯಾಸ ಮಾಡಿಸಿ ಶುಭ ಹಾರೈಸಿ ಆಶೀರ್ವಚನ ಮಾಡಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ, ಸಂಚಾಲಕರಾದ ವಸಂತ ಮಾಧವ, ರಮೇಶ್ ಶ್ರೀಮಾನ್, ಡಾ.ಕಮಲಾ ಪ್ರಭಾಕರ ಭಟ್, ಹಾಗೂ ಎಲ್ಲಾ ವಿಭಾಗದ ಪ್ರಮುಖರೂ, ಆಡಳಿತ ಮಂಡಳಿ ಸದಸ್ಯರು, ಬೋಧಕ – ಬೋಧಕೇತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಭ.ಪೂರ್ಣಿಮಾ ನಿರೂಪಿಸಿ, ಭ.ದಿವ್ಯಾ ಸ್ವಾಗತಿಸಿ, ಭ.ಪವ್ಯಾ ವಂದಿಸಿದರು.

WhatsApp Image 2021 10 15 At 15.08.27 300x225

Related Articles