ಕುಶಾಲನಗರ – ಸಾಮೂಹಿಕ ಶ್ರೀ ಮಧ್ವಾಷ್ಟೊತ್ತರ ಶತನಾಮಾವಳಿ ಪಾರಾಯಣ…

ಕುಶಾಲನಗರ: ಕುಶಾಲನಗರದಲ್ಲಿ ಮಧ್ವ ನವಮಿಯ ಪ್ರಯುಕ್ತ ಸಾಮೂಹಿಕ ಶ್ರೀ ಮಧ್ವಾಷ್ಟೊತ್ತರ ಶತನಾಮಾವಳಿ ಪಾರಾಯಣ ಸಂಪನ್ನಗೊಂಡಿತು.
ಪರ್ಯಾಯ ಶ್ರೀ ಪುತ್ತಿಗೆ ಮಠದ ಡಾ. ಶ್ರೀ ಶ್ರೀ ಸುಗುಣೇ0ದ್ರ ತೀರ್ಥ ಸ್ವಾಮೀಜಿ ಯವರಿಂದ ಲೋಕಾರ್ಪಣೆಗೊಂಡ, ಪಲಿಮಾರು ಮಠದ 24 ನೇ ಪೀಠ ಅಧಿಪತಿಗಳಾದ ಶ್ರೀ ಶ್ರೀ ರಘುಪ್ರವೀರ ತೀರ್ಥರು ರಚಿಸಿದ, ಬೆಂಗಳೂರಿನ ತೌಳವ ಮಾಧ್ವ ಒಕ್ಕೂಟ ನಿರ್ಮಾಣ ಮಾಡಿದ ಧ್ವನಿ ಸುರುಳಿಯನ್ನು ಆಧರಿಸಿ ಪಾರಾಯಣ ನಡೆಯಿತು. ಕುಶಾಲನಗರ ಪರಿಸರದ 15 ಕ್ಕೂ ಮಿಕ್ಕಿ ಭಜನ ಮಂಡಳಿಗಳ ನೂರಾರು ಭಜಕರು ಭಾಗವಹಿಸಿದ್ದರು.

whatsapp image 2024 02 20 at 11.52.08 am

Related Articles

Back to top button