ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 11 , ಉಡುಪಿ ಜಿಲ್ಲೆಯಲ್ಲಿ 9 ಮಂದಿಗೆ ಕೊರೊನ ಪಾಸಿಟಿವ್ ….

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು (ಬುಧವಾರ) ಒಟ್ಟು 11 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು ಇದರಲ್ಲಿ ಹತ್ತು ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದು ಓರ್ವ ಮಾತ್ರ ಗುಜರಾತ್ ನಿಂದ ಬಂದವರಾಗಿದ್ದಾರೆ.

ಜಿಲ್ಲೆಯ ಸೋಂಕಿತರಲ್ಲಿ 3 ವರ್ಷದ ಮಗು ಸೇರಿ 35 ವರ್ಷದ ಗಂಡಸು, 36 ವರ್ಷದ ಹೆಂಗಸು , 46 ವರ್ಷದ ಗಂಡಸು , 11 ವರ್ಷದ ಹೆಣ್ಣು , 59 ವರ್ಷದ ಹೆಂಗಸು, 37 ವರ್ಷದ ಹೆಂಗಸು, 45 ವರ್ಷದ ಹೆಂಗಸು, 22 ವರ್ಷದ ಗಂಡು, 37 ವರ್ಷದ ಗಂಡಸು, 17 ವರ್ಷದ ಹೆಣ್ಣಿನಲ್ಲಿ ಸೋಂಕು ದೃಢಪಟ್ಟಿದ್ದು ಎಲ್ಲರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಉಡುಪಿಯಲ್ಲಿ ಮೇ 26 ರ ಸಂಜೆ 5 ರಿಂದ ಮೇ 27 ರ ಮಧ್ಯಾಹ್ನ 12 ರವರೆಗೆ 9 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ 9 ವರ್ಷದ ಬಾಲಕ ಸೇರಿ 7 ಪುರುಷರಿಗೆ ಹಾಗೂ 2 ಮಹಿಳೆಯರಿಗೆ ಕೊರೊನಾ ಪಾಸಿಟಿವ್‌ ಆಗಿದ್ದು ಅವರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಈ ಎಲ್ಲಾ 9 ಕೊರೊನಾ ಸೋಂಕಿತರು ಕೂಡಾ ಮಹಾರಾಷ್ಟ್ರದಿಂದ ವಾಪಾಸ್‌ ಬಂದವರಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 120 ಏರಿಕೆಯಾಗಿದೆ.

Sponsors

Related Articles

Leave a Reply

Your email address will not be published. Required fields are marked *

Back to top button