ಪೆರಾಜೆ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ,ಪುಸ್ತಕ ವಿತರಣೆ…

ಬಂಟ್ವಾಳ, ಜೂ 29 :ರಾಷ್ಟ್ರೀಯ ಮಾನವ ಹಕ್ಕು,ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಸಂಸ್ಥೆ ವತಿಯಿಂದ ಪೆರಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಗಳಿಗೆ ಉಚಿತ ಬ್ಯಾಗ್ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮ ವು ಸಂಸ್ಥೆಯ ಜಿಲ್ಲಾಧ್ಯಕ್ಷ ಸಚಿದಾನಂದ ರೈ ಪಾಳ್ಯ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸರಕಾರಿ ಶಾಲೆ ಉಳಿಸಿ ಬೆಳೆಸುವ ಎಂಬ ಘೋಷಣೆ ಯೊಂದಿಗೆ ಶಾಲಾಭಿವೃದ್ದಿ ಸಮಿತಿಯನ್ನು ರಚಿಸಲಾಗಿದ್ದು ಮಾಣಿ ಲಯನ್ಸ್ ಕ್ಲಬ್ ಅಧ್ಯಕ್ಷ ಜನಾರ್ದನ ಪೆರಾಜೆಯವರ ನೇತೃತ್ವದಲ್ಲಿ ಶಾಲೆಯ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ,ಶಾಲಾ ವಾಹನ ವ್ಯವಸ್ಥೆ, ಸಮವಸ್ತ್ರ ವ್ಯವಸ್ಥೆ ಯನ್ನು ಮಾಡಲಾಗಿದೆ. ಸ್ಥಳೀಯರ ಸಹಕಾರದಲ್ಲಿ ಸಾಮಾಜಿಕ ಕಾರ್ಯಕರ್ತ ಕುಶಲ ಎಂ.ನೇತೃತ್ವದಲ್ಲಿ ಒಂದರಿಂದ ಏಳನೇ ತರಗತಿಯವರೆಗೆ ಹೊಸದಾಗಿ ಮಕ್ಕಳನ್ನು ಸೇರ್ಪಡೆ ಗೊಳಿಸಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿ ಶಾಲೆಗೆ ಬೇಕಾದ ಶಿಕ್ಕರು,ಶೌಚಾಲಯ ಮೊದಲಾದ ವ್ಯವಸ್ಥೆ ಗಳನ್ನು ಮಾಡಲಾಗಿದೆ.
ಮಾನವ ಹಕ್ಕು ಸಂಸ್ಥೆಯ ಜಿಲ್ಲಾ ಉಪಾಧ್ಯಕ್ಷ ಜಯಾನಂದ ಪೆರಾಜೆಯವರು ಮಾತನಾಡಿ ಶಿಕ್ಷಕರ ಮತ್ತು ಹೆತ್ತವರ ಜವಾಬ್ದಾರಿ ಬಗ್ಗೆ ಮಾಹಿತಿ ನೀಡಿದರು.
ಪ್ರಮುಖರಾದ ಡಾ.ಶ್ರೀನಾಥ ಆಳ್ವ, ಜಯರಾಮ ರೈ ಪೆರಾಜೆಗುತ್ತು, ರವೀಂದ್ರ ರೈ,ಚಂದ್ರಹಾಸ ಶೆಟ್ಟಿ ಬುಡೋಳಿಗುತ್ತು,ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಝೀನತ್ ,ಮುಖ್ಯ ಶಿಕ್ಷಕಿ ರೂಪ ಹಾಗೂ ಶಾಲಾಶಿಕ್ಷಕಿಯರು ಉಪಸ್ಥಿತರಿದ್ದು ಸಹಕರಿಸಿದರು.

Related Articles