ಭೀಕರ ರಸ್ತೆ ಅಪಘಾತ – ಕೋಡಿಬೈಲ್ ಏಜೆನ್ಸಿಸ್ ಮಾಲಕ ಸತ್ಯನಾರಯಣ ಭಟ್‌ ನಿಧನ…

ಪುತ್ತೂರು: ಪುತ್ತೂರಿನ ಬೈಪಾಸು ರಸ್ತೆ ತೆಂಕಿಲ ಬಳಿ ಮೇ 17 ರಂದು ಬೆಳಿಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕೋಡಿಬೈಲ್
ಏಜೆನ್ಸಿಸ್ ಮಾಲಕ ಸತ್ಯನಾರಯಣ ಭಟ್‌ ಮೃತಪಟ್ಟಿದ್ದಾರೆ.
ಇಂದು ಬೆಳಿಗ್ಗೆ ಪುತ್ತೂರಿನ ದರ್ಭೆಯ ಅಶ್ವಿನಿ ಸರ್ಕಲ್‌ ಬಳಿಯ ತಮ್ಮ ಮಳಿಗೆಗೆ ಬಂದಿದ್ದ ಅವರು ಅಲ್ಲಿ ತಮ್ಮ ಕಾರ್‌ ಪಾರ್ಕ್‌ ಮಾಡಿ ಸ್ಕೂಟರ್‌ ನಲ್ಲಿ ಬೈಪಾಸ್‌ ನಲ್ಲಿ ತೆರಳುತಿದ್ದ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಲಾರಿ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್‌ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರ ಪೊಲೀಸ್‌ ಠಾಣೆಯ ಎಸ್‌.ಐ ರಾಮನಾಯ್ಕ್‌ ಮತ್ತು ಸಿಬ್ಬಂದಿಗಳು ತೆರಳಿ ಮಾಹಿತಿ ಪರಿಶೀಲನೆ ನಡೆಸಿದ್ದಾರೆ.

1a28f953 Ea76 4110 9821 0e0400055af4 225x300

2809eaae 68b1 4576 Acfb 373254a8c145 300x225

IMG 20210517 WA0042 300x211

Related Articles