ದ.ಕ – ಶನಿವಾರ ಸಂಜೆ 7 ರಿಂದ ಸೋಮವಾರ ಬೆಳಿಗ್ಗೆ 7 ರ ವರೆಗೆ ಸಂಪೂರ್ಣ ಲಾಕ್ ಡೌನ್ – ಡಿಸಿ ಸಿಂಧೂ ಬಿ ರೂಪೇಶ್…
ಮಂಗಳೂರು: ಕೊರೊನಾ ಸೋಂಕು ನಿಯಂತ್ರಿಸುವ ಸಲುವಾಗಿ ದ.ಕ ಜಿಲ್ಲೆಯಲ್ಲಿ ಮೇ 23ರ ಶನಿವಾರ ಸಂಜೆ 7 ಗಂಟೆಯಿಂದ ಮೇ 25ರ ಸೋಮವಾರ ಬೆಳಗ್ಗೆ 7 ಗಂಟೆಯ ತನಕ ಲಾಕ್ ಡೌನ್ ಮಾಡಿ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಆದೇಶ ನೀಡಿದ್ದಾರೆ.
ಈ ಅವಧಿಯಲ್ಲಿ ಅಗತ್ಯ ವಸ್ತುಗಳಾದ ಪತ್ರಿಕೆ, ತರಕಾರಿ, ಮೀನು, ಮಾಂಸ, ಹಾಲು, ಔಷದ ಪೊರೈಕೆ/ಖರೀದಿಗೆ ಅವಕಾಶ ನೀಡಲಾಗಿದ್ದು, ಅಂಗಡಿ ಮುಂಗಟ್ಟುಗಳು, ಹೊಟೇಲ್ ಗಳು ಸಂಪೂರ್ಣ ಮುಚ್ಚಿರುತ್ತದೆ. ಎಲ್ಲಾ ರೀತಿಯ ಖಾಸಗಿ ಹಾಗೂ ಸಾರ್ವಜನಿಕ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.