ಬಿ.ಸಿ.ರೋಡ್- ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಖಂಡಿಸಿ ವಿ.ಹಿಂ.ಪ., ಬಜರಂಗದಳದಿಂದ ಪ್ರತಿಭಟನೆ…

ಬಂಟ್ವಾಳ: ಬಾಂಗ್ಲಾ ದೇಶದಲ್ಲಿ ನವರಾತ್ರಿ ಸಂದರ್ಭ ಹಿಂದೂ ಸಮುದಾಯದ ಮೇಲೆ ಮತಾಂಧ ಮುಸ್ಲಿಂ ಸಂಘಟನೆಗಳು ದಾಳಿ ಮಾಡಿರುವ ಕೃತ್ಯವನ್ನು ಖಂಡಿಸಿ ವಿ.ಹಿಂ.ಪ.,ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಅ. 20 ರಂದು ಬಿ.ಸಿ.ರೋಡಿನ ಮೇಲ್ಸೇತುವೆಯ ಕೆಳಭಾಗದಲ್ಲಿ ಪ್ರತಿಭಟನೆ ನಡೆಯಿತು.
ಸಂಸ್ಕಾರ ಭಾರತಿ ತಾಲೂಕು ಸಂಚಾಲಕ ಸರಪಾಡಿ ಅಶೋಕ ಶೆಟ್ಟಿ ಅವರು ಮಾತನಾಡಿ, ಆಚಾರ ,ವಿಚಾರ,ಸಂಸ್ಕೃತಿಯಿಂದ ಹಿಂದೂ ರಾಷ್ಟ್ರವಾಗಿರುವ ಭಾರತದಲ್ಲಿ ಹಿಂದುಗಳ ಮೀಲಿನ ದೌರ್ಜನ್ಯ ಮರುಕಳಿಸುತ್ತಿದ್ದು, ಇದನ್ನು ಎದುರಿಸಲು ಗ್ರಾಮ ಮಟ್ಟದಲ್ಲಿ ವಿ.ಹಿಂ.ಪ.,ಬಜರಂಗದಳ ಸನ್ನದ್ದವಾಗಿದೆ ಎಂದರು. ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಹತ್ಯೆ,ದೇವಸ್ಥಾನಗಳ ಮೇಲಿನ ದಾಳಿ, ಮನೆಗೆ ಬೆಂಕಿ ಹಚ್ಚುವಂತ ಕೃತ್ಯದಿಂದ ಹಿಂದೂಗಳ ಪಾಲಿಗೆ ನರಕ ಸದೃಶ್ಯವಾಗಿದ್ದು, ಬಾಂಗ್ಲಾ ಸರಕಾರ ಹಿಂದೂ ಗಳನ್ನು ಸಂರಕ್ಷಿಸಬೇಕು ಎಂದು ಒತ್ತಾಯಿಸಿದರು. ಅರ್. ಎಸ್‌ ಎಸ್. ರಾಷ್ಟ್ರ ಭಕ್ತ ಸಂಸ್ಥೆಯಾಗಿದ್ದು, ಕೆಲವು ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥ ಮತ್ತು ರಾಜಕೀಯ ತೆವಲಿಗಾಗಿ ಟೀಕಿಸುವುದನ್ನು ಖಂಡಿಸಿದ ಅವರು ಇತ್ತೀಚಿನ ದಿನಗಳಲ್ಲಿ ಹಿಂದೂ ವಿರೋಧಿ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಹಿಂದೂ ಸಮಾಜ ಎಚ್ಚರಿಕೆ ವಹಿಸಬೇಕಾಗಿದೆ ಎಂದರು. ಬಜರಂಗದಳದ ಜಿಲ್ಲಾ ಸಹಸಂಚಾಲಕ ಗುರುರಾಜ್ ಬಂಟ್ವಾಳ,ಪ್ರಖಂಡ ಸಂಚಾಲಕ ಶಿವಪ್ರಸಾದ್ ತುಂಬೆ, ಪ್ರಮುಖರಾದ ಸಂತೋಷ್ ಸರಪಾಡಿ, ದೀಪಕ್ ಅಜೆಕಳ, ವಿನೀತ್ ತುಂಬೆ, ಪ್ರಸಾದ್ ಬೆಂಜನಪದವು, ಪ್ರವೀಣ್ ಕುಂಟಾಲಪಲ್ಕೆ, ಹರೀಶ್ ಅಮ್ಟಾಡಿ ಮತ್ತಿತರರಿದ್ದರು.

Sponsors

Related Articles

Back to top button