ವೀರಕಂಭ ಗ್ರಾಮದ ಮಂಗಳಪದವು – ಸ್ವಚ್ಛತಾ ಜಾಥಾ ಕಾರ್ಯಕ್ರಮ…
ಬಂಟ್ವಾಳ: ವೀರಕಂಭ ಗ್ರಾಮ ಪಂಚಾಯತ್, ಸರಕಾರಿ ಪ್ರಥಮ ದರ್ಜೆ ಕಾಲೇಜ್ ವಿಟ್ಲ, ಸ್ನೇಹ ಸಂಜೀವಿನಿ ವೀರಕಂಭ ಒಕ್ಕೂಟ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದೊಂದಿಗೆ ಸ್ವಚ್ಛತಾ ಜಾಥಾ ಕಾರ್ಯಕ್ರಮವು ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಮಂಗಳ ಪದವಿನಲ್ಲಿ ನಡೆಯಿತು.
ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ಲಲಿತಾ ಮಂಗಳಪದವು ಜಂಕ್ಷನ್ ನಲ್ಲಿ ಜಾಥಾಕೆ ಚಾಲನೆ ನೀಡಿದರು. ನಂತರ ಮಂಗಳಪದವಿನ ಅಂಗನವಾಡಿ ಕನಕ ಜಾಥಾ ನಡೆಸಲಾಯಿತು. ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ವಿವಿಧ ರೀತಿಯ ಸ್ವಚ್ಛತಾ ನಾಮಫಲಗಳನ್ನು ಹಿಡಿದುಕೊಂಡು, ಸ್ವಚ್ಛತಾ ಘೋಷಣೆಗಳನ್ನು ಕೂಗುತ್ತಾ ಮಂಗಳಪದ ಪರಿಸರದ ಅಂಗಡಿಗಳಿಗೆ ಹಾಗೂ ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ಕರಪತ್ರ ಪತ್ರವನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ, ಸದಸ್ಯರುಗಳಾದ ಅಬ್ದುಲ್ ರಹಿಮಾನ್, ಸಂದೀಪ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿಶಾಂತ್, ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಉಷಾ,ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯಾ ಘಟಕ ಯೋಜನಾಧಿಕಾರಿ ಜ್ಯೋತಿ ಪಿ ಎಸ್, ಯುವ ರೆಡ್ ಕ್ರಾಸ್ ಘಟಕದ ಯೋಜನಾಧಿಕಾರಿ ಶಶಿಕಲಾ, ರೋವರ್ಸ್ ಮತ್ತು ರೇಂಜರ್ಸ್ ಘಟಕದ ರೋವರ್ ಲೀಡರ್ ಪ್ರಸನ್ನ ಕುಮಾರ್, ರೇಂಜರ್ಸ್ ಲೀಡರ್ ಸೌಮ್ಯ ಎಚ್, ಈಕೋ ಕ್ಲಬ್ ಸಂಚಾಲಕ ನಾಗರಾಜ್, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ನಾಯಕ ಜೀವನ್ ಡಿಸೋಜ, ವೀರಕಂಬ ಗ್ರಾಮ ಸ್ನೇಹ ಸಂಜೀವಿನಿ ಒಕ್ಕೂಟದ ಎಂ ಬಿ ಕೆ ಮಲ್ಲಿಕಾ, ಎಲ್ ಸಿ ಆರ್ ಪಿ ಜಯಂತಿ, ಒಕ್ಕೂಟ ಅಧ್ಯಕ್ಷೆ ವಿಜಯ, ಕಾರ್ಯದರ್ಶಿ ದೀಪ, ಪ್ರೇರಕಿ ಕುಸುಮಾವತಿ, ಕೃಷಿ ಉದ್ಯೋಗ ಸಖಿ ಇಂದಿರಾ, ಗ್ರಾಮ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಾದ ಲೀಲಾವತಿ, ಕೋಮಲಾಕ್ಷಿ, ಶಶಿಕಲಾ,ಸ್ನೇಹಲತಾ,ಅಂಗನ ವಾಡಿ ಶಿಕ್ಷಕಿ ಶೃತಿ ಸಹಾಯಕಿ ಪ್ರಜ್ಞಾ,ಪಂಚಾಯತ್ ಸಿಬ್ಬಂದಿಗಳಾದ ಮಿಥುನ್, ಚಂದ್ರಹಾಸ, ದಿವ್ಯಮತಿ,ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು, ವೀರಕಂಭ ಗ್ರಾಮ ಪಂಚಾಯತಿನ ಸೇವಾ ಸಂಜೀವಿನಿ ಒಕ್ಕೂಟದ ಸದಸ್ಯರುಗಳು, ಸಾರ್ವಜನಿಕರು ಭಾಗವಹಿಸಿದ್ದರು.