ತಾಳ ಪ್ರಕ್ರಿಯೆ ಕಾರ್ಯಾಗಾರದ ಫಲ ಪಡೆದುಕೊಳ್ಳಿ – ವಿವೇಕ್ ಆಳ್ವ…
ಮೂಡುಬಿದಿರೆ: ಯಾವುದೇ ವಿಚಾರದ ಮೂಲ ವಿವರಗಳನ್ನು ಅರಿತಾಗ ಮಾತ್ರ ಗುರಿ ತಲುಪಲು ಸಾಧ್ಯ. ಹಾಗಾಗಿ ಸಂಗೀತ- ನೃತ್ಯಾದಿ ಲಲಿತ ಕಲೆಗಳನ್ನು ಆಚರಿಕೊಂಡು ಬಂದಿರುವ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಗಾಗಿಯೇ ಆಯೋಜಿಸಲಾಗಿರುವ ತಾಳ ಪ್ರಕ್ರಿಯೆ ಕಾರ್ಯಾಗಾರದ ಫಲ ಪಡೆದುಕೊಳ್ಳುವ ಕಡೆ ಗಮನ ಹರಿಸಿ ಶ್ರದ್ಧೆಯಿಂದ ಪಾಲ್ಗೊಳ್ಳಿ ಎಂದು ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಕಿವಿಮಾತು ಹೇಳಿದರು.
ಅವರು ಕುವೆಂಪು ಸಭಾಂಗಣದಲ್ಲಿ ಜ. 31 ಮತ್ತು ಫೆ. 1 ರಂದು ಆಳ್ವಾಸ್ ಎಜುಕೇಷನ್ ಫೌಂಡೇಶನ್ ಯೋಜಿಸಿದ 2 ದಿನಗಳ ತಾಳ ಪ್ರಕ್ರಿಯೆ ಕಾರ್ಯಾಗಾರವನ್ನು ಉದ್ಘಾಟಿಸಿ ಶುಭಹಾರೈಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಸಂಗೀತ ಗುರು ಕೆ. ವಿ. ರಮಣ್, ವಿದ್ವಾನ್ ಮಂಜುನಾಥ್ ಎನ್ ಪುತ್ತೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಯನ ವಿ ರಮಣ್ ನಿರೂಪಿಸಿ, ವಂದಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಅಂಜಲಿ ಸಹಿತ 48 ಶಿಬಿರಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸುತ್ತಿದ್ದಾರೆ.