ಸೆ. 1,2,3 ಕ್ಕೆ ದಾರುಲ್ ಹುದಾ ತಂಬಿನಮಕ್ಕಿ ಸಾದಾತ್ ಆಂಡ್ ನೇರ್ಚೆ – ಸ್ವಾಗತ ಸಮಿತಿ ಅಸ್ತಿತ್ವಕ್ಕೆ…

ಸುಳ್ಯ: ದಾರುಲ್ ಹುದಾ ತಂಬಿನಮಕ್ಕಿ ವರ್ಷಂಪ್ರತಿ ನಡೆಸಿ ಬರುವ ಸಾದಾತ್ ಆಂಡ್ ನೇರ್ಚೆ ಇದರ ಸ್ವಾಗತ ಸಮಿತಿ ರಚನೆಯು ಜು.17 ರಂದು ತಂಬಿನಮಕ್ಕಿಯಲ್ಲಿ ನಡೆಯಿತು.
ಸಯ್ಯಿದ್ ಹಾಮಿದ್ ಅಹ್ದಲ್ ತಙಳರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡ ಸಭೆಯನ್ನು ಖಲಂದರ್ ಹಿಮಮಿ ಸಖಾಫಿ ಉದ್ಘಾಟಿಸಿದರು.
ಸಂಸ್ಥೆಯ ಜನರಲ್ ಮೆನೇಜರ್ ಖಲೀಲ್ ಹಿಮಮಿ ಸಖಾಫಿಯವರು ವಿಷಯ ಮಂಡನೆ ನಡೆಸಿದರು.ತದನಂತರ ಕಾರ್ಯಕ್ರಮದ ದಿನಾಂಕ ಘೋಷಿಸಿ ಸ್ವಾಗತ ಸಮಿತಿಗೆ ಚಾಲನೆ ನೀಡಲಾಯಿತು. ಚಯರ್ ಮೆನ್ ಆಗಿ ಸುಲೈಮಾನ್ ಹಾಜಿ ಇಂದ್ರಾಜೆ, ಕನ್ವೀನರ್ ಆಗಿ ಅಶ್ರಫ್ ನೇಲ್ಯಮಜಲು, ಟ್ರಷರರ್ ಆಗಿ ಹನೀಫ್ ಹಾಜಿ ಇಂದ್ರಾಜೆ ರವರನ್ನು ಆಯ್ಕೆ ಮಾಡಲಾಯಿತು.
ಸಿದ್ದೀಖ್ ಹಿಮಮಿ ಸಖಾಫಿ ಸ್ವಾಗತಿಸಿದ ಕಾರ್ಯಕ್ರಮವನ್ನು ಯೂಸುಫ್ ಮುಸ್ಲಿಯಾರ್ ಬೆಳ್ಳಾರೆ ವಂದಿಸಿದರು.


