ನಗ್ರಿಗುತ್ತು ಜುಮಾದಿ ಬಂಟ ದೈವಸ್ಥಾನ – ತಡೆಗೋಡೆ ಲೋಕಾರ್ಪಣೆ…
ಬಂಟ್ವಾಳ: ಸಜಿಪ ಮೂಡ ಗ್ರಾಮದ ನಗ್ರಿಗುತ್ತು ಜುಮಾದಿ ಬಂಟ ದೈವಸ್ಥಾನ ಬಳಿ ಮೂವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ತಡೆಗೋಡೆಯನ್ನು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಮೇ.6 ರಂದು ಲೋಕಾರ್ಪಣೆಗೊಳಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು, ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಸಜಿಪ ಗುತ್ತು ಗಡಿ ಪ್ರಧಾನರಾದ ಕೋಚ್ ಬಂಡಾರಿ/ ಮುಂಡಪ್ಪ ಶೆಟ್ಟಿ ,ವಿವೇಕ ಶೆಟ್ಟಿ, ನಗ್ರಿ ಗುತ್ತು ರೋಹಿತ್ ಶೆಟ್ಟಿ , ನಗ್ರಿಗುತ್ತು ಶ್ರೀಕಾಂತ್ ಶೆಟ್ಟಿ ಸಂಕೇಶ ಮೊದಲಾದವರು ಉಪಸ್ಥಿತರಿದ್ದರು.