ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ – “ಟೆಕ್ ಯುವ 23” ಮತ್ತು “ಕಲಾಸ್ಪಂದನ-23”…
ಮಂಗಳೂರು: ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಸಂಸ್ಥೆಯು ಕಳೆದ ಹತ್ತು ವರ್ಷಗಳಿಂದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುವ ಉದ್ದೇಶದಿಂದ “ಟೆಕ್ ಯುವ” ರಾಷ್ಟ್ರೀಯ ಮಟ್ಟದ ತಾಂತ್ರಿಕ ಸಾಂಸ್ಕೃತಿಕ ಮತ್ತು ಕ್ರೀಡಾ ಉತ್ಸವವನ್ನು ಆಯೋಜಿಸುತ್ತಿದೆ. ಈ ವರ್ಷ “ಟೆಕ್ ಯುವ 23” ಕಾರ್ಯಕ್ರಮವನ್ನು ಜೂ. 22 ಮತ್ತು 23 ರಂದು ಆಯೋಜಿಸಲಿದ್ದೇವೆ ಎಂದು ಸಂಘಟಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಟೆಕ್ ಯುವದ ಮೊದಲ ಆವೃತ್ತಿಯನ್ನು 2013 ರಲ್ಲಿ ಆಯೋಜಿಸಲಾಗಿತ್ತು. ಆರಂಭದಿಂದಲೂ, ಪ್ರತಿ ವರ್ಷ, ಕರ್ನಾಟಕ – ಗೋವಾ – ತಮಿಳುನಾಡು – ಕೇರಳ ರಾಜ್ಯಗಳ ವಿವಿಧ ಇಂಜಿನಿಯರಿಂಗ್ ಕಾಲೇಜುಗಳಿಂದ ಸುಮಾರು 400 ಕ್ಕೂ ಅಧಿಕ ವಿದ್ಯಾರ್ಥಿಗಳು ಟೆಕ್ ಯುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಕಳೆದ ವರ್ಷಗಳಲ್ಲಿ “ಟೆಕ್ ಯುವ” ಕಾರ್ಯಕ್ರಮವು ದೊಡ್ಡ ಪ್ರಮಾಣದಲ್ಲಿ ಯಶಸ್ಸನ್ನು ಹೊಂದುವಲ್ಲಿ ನಮ್ಮೊಂದಿಗೆ ಸಹಕರಿಸಿ, ವ್ಯಾಪಕ ಪ್ರಚಾರವನ್ನು ನೀಡಿದ ಮಾಧ್ಯಮ ಮಿತ್ರರಿಗೆ ನಾವು ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದೂ ಅವರು ಹೇಳಿದ್ದಾರೆ.
ಜೂ. 22 ರಂದು “ಟೆಕ್ ಯುವ 23” ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಮೆರಿಕಾದ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಮತ್ತು ಕಿಲ್ಬಿ ಲ್ಯಾಬ್ ಇದರ ತಾಂತ್ರಿಕ ವಿಭಾಗದ ಸದಸ್ಯರು ಹಾಗೂ ಕರ್ನಾಟಕ ಮೈಕ್ರೋ ಇಲೆಕ್ಟ್ರೋನಿಕ್ ಡಿಸೈನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಮತ್ತು ನಿರ್ದೇಶಕರಾದ ಶ್ರೀ ರತ್ನಾಕರ್ ಎಸ್. ಭಟ್ ರವರು ಭಾಗವಹಿಸಿ, ಟೆಕ್ ಯುವ 23 ತಾಂತ್ರಿಕ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಶ್ರೀ ರತ್ನಾಕರ್ ಎಸ್. ಭಟ್ ರವರು ಮೈಕ್ರೋ ಪ್ರೊಸೆಸರ್ ಚಿಪ್ ಡಿಸೈನ್, ಅನಾಲಾಗ್ ಲೇಔಟ್, ಅಟೋಮೇಷನ್ ಟೂಲ್ಸ್, ಪರ್ಲ್ ಶೆಲ್, ಪವರ್ ಮ್ಯಾನೇಜ್ಮೆಂಟ್ ಚಿಪ್ಸ್ ಡಿಸೈನ್ ಕ್ಷೇತ್ರಗಳಲ್ಲಿ ಕಳೆದ ಹದಿನೇಳು ವರ್ಷಗಳಿಂದ ಭಾರತ, ಅಮೇರಿಕ, ಜರ್ಮನಿ, ಫ್ರಾನ್ಸ್ ಮತ್ತಿತರ ದೇಶಗಳಲ್ಲಿ ನೂರಕ್ಕೂ ಅಧಿಕ ಪ್ರೋಜೆಕ್ಟ್ ಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ.
ಜೂ. 24 ರಂದು, ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗಾಗಿ “ಕಲಾಸ್ಪಂದನ-23” ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕ್ರೆಡೈ ಮತ್ತು ಕರಾವಳಿ ಪ್ರವಾಸೋದ್ಯಮ ಸಂಘದ ಅಧ್ಯಕ್ಷರು, ರಂಗಸ್ಥಳ ಸಾಂಸ್ಕೃತಿಕ ಸೇವಾ ಟ್ರಸ್ಟ್ ಅಧ್ಯಕ್ಷರು ಹಾಗೂ ಸಾಯಿ ರಾಧಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಮನೋಹರ್ ಎಸ್. ಶೆಟ್ಟಿ ಯವರು ಭಾಗವಹಿಸಿ, ಕಲಾಸ್ಪಂದನ-23 ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿಗಳಾದ ಡಾ. ಸಿಎ ಎ.ರಾಘವೇಂದ್ರ ರಾವ್ ರವರು ಈ ಎರಡೂ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಸಹಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ್ ರಾವ್ ರವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶ್ರೀನಿವಾಸ ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿಯ ಸದಸ್ಯರುಗಳಾದ ಶ್ರೀಮತಿ. ಎ. ವಿಜಯಲಕ್ಷ್ಮಿ ಆರ್. ರಾವ್ ಹಾಗೂ ಪ್ರೊ. ಶ್ರೀಮತಿ. ಎ. ಮಿತ್ರ ಎಸ್ ರಾವ್, ಶ್ರೀನಿವಾಸ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪಿ ಎಸ್ ಐತಾಳ್, ಶ್ರೀ ಆದಿತ್ಯ ಕುಮಾರ್ ಮಯ್ಯ (ರಿಜಿಸ್ಟ್ರಾರ್ ಅಕಾಡೆಮಿಕ್ ಮತ್ತು ಡೆವಲಪ್‌ಮೆಂಟ್), ಡಾ. ಅನಿಲ್ ಕುಮಾರ್ (ರಿಜಿಸ್ಟ್ರಾರ್), ಡಾ. ಶ್ರೀನಿವಾಸ ಮಯ್ಯ ಡಿ. (ರಿಜಿಸ್ಟ್ರಾರ್ ಮೌಲ್ಯಮಾಪನ), ಡಾ. ಅಜಯ್ ಕೆ. ಜಿ. (ರಿಜಿಸ್ಟ್ರಾರ್ ಡೆವಲಪ್‌ಮೆಂಟ್), ಕಾಲೇಜಿನ ಮುಖ್ಯಸ್ಥರಾದ ಡಾ. ಥಾಮಸ್ ಪಿಂಟೋ, ಟೆಕ್ ಯುವ ಮತ್ತು ಕಲಾಸ್ಪಂದನ ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಕೆ. ಶ್ರೀನಾಥ್ ರಾವ್, ಟೆಕ್ ಯುವ-23 ರ ವಿದ್ಯಾರ್ಥಿ ಸಮನ್ವಯಕಾರರಾದ ಶ್ರೀ ರೋಷನ್ ರಾಕೇಶ್ ನಾಯರ್ ಮತ್ತು ಕುಮಾರಿ ವೈಷ್ಣವಿ ಶಣೈ, ಹಾಗೂ ಕಲಾಸ್ಪಂದನ-23 ರ ವಿದ್ಯಾರ್ಥಿ ಸಮನ್ವಯಕಾರರಾದ ಕುಮಾರಿ ಸನ್ನಿಧಿ ಶೆಟ್ಟಿ ಉಪಸ್ಥಿತರಿರಲಿದ್ದಾರೆ.
ಟೆಕ್ ಯುವ 23 ರಲ್ಲಿ ತಾಂತ್ರಿಕ, ಸಾಂಸ್ಕೃತಿಕ, ಸಾಹಿತ್ಯ ಮತ್ತು ಕ್ರೀಡೆಗಳಿಗೆ ಸಂಬಂಧಿಸಿದ 50 ಕ್ಕೂ ಅಧಿಕ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಎರಡು ದಿನಗಳ ಕಾಲ ನಡೆಯಲಿರುವ ಟೆಕ್ ಯುವ 23 ತಾಂತ್ರಿಕ ಉತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 900 ರಿಂದ 1,000 ಇಂಜಿನಿಯರಿಂಗ್ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ, ಹಾಗೂ ಸುಮಾರು 2,500 ಇಂಜಿನಿಯರಿಂಗ್ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೊದಲನೇ ದಿನ, ಜೂನ್ 22 ರಂದು ಮೆಕ್ಯಾನಿಕಲ್, ಸಿವಿಲ್, ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಸೈಬರ್ ಸೆಕ್ಯೂರಿಟಿ ಆಂಡ್ ಸೈಬರ್ ಫೊರೆನ್ಸಿಕ್ಸ್, ಏರ್ ಕ್ರಾಫ್ಟ್ ಮೈಂಟೆನನ್ಸ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಆಂಡ್ ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳಿಗಾಗಿ ಪೇಪರ್ ಪ್ರೆಸೆಂಟೇಶನ್, ಮೋಡೆಲ್ ಮೇಕಿಂಗ್, ಕೊಲಾಜ್, ರೋಬೋ ವಾರ್ಸ್, 3D CAD ಮೋಡೆಲಿಂಗ್, ಕೋಡ್ ಹಂಟ್, ರೋಬೋ ಸೋಕರ್, ಲೈನ್ ಫೋಲೋವೆರ್, RC ರೇಸಿಂಗ್, ಟೆಕ್ನಿಕಲ್ ಕ್ವಿಜ್, ಪೇಪರ್ ಪ್ಲೇನ್, ತಕ್ಷಕ್, ಜಸ್ಟ್ ಎ ಮಿನಿಟ್, ಮಾರ್ಕೋವಿಸ್ಟಾ ಮತ್ತಿತರ ತಾಂತ್ರಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಎರಡನೇ ದಿನ, ಜೂ. 23 ರಂದು ಹಾಡುಗಾರಿಕೆ, ಗ್ರೂಪ್ ಡ್ಯಾನ್ಸ್, ಟಗ್ ಆಫ್ ವಾರ್, ಬಾಸ್ಕೆಟ್ ಬಾಲ್, ಬ್ಯಾಡ್ಮಿಂಟನ್, ಫೋಟೋಗ್ರಫಿ, ಫೇಸ್ ಪೇಂಟಿಂಗ್, ಮೋಕ್ ಪ್ರೆಸ್ ಮತ್ತು ಟ್ರೆಷರ್ ಹಂಟ್, ಬಿಜಿಎಂಐ, ಸ್ಟ್ಯಾಂಡ್ ಅಪ್ ಕಾಮೆಡಿಯನ್, ಸ್ಲೋ ಬೈಕ್ ರೇಸ್ ಹಾಗೂ ಇನ್ನಿತರ ವಿವಿಧ ಬಗೆಯ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಚೆಸ್, ಕಬಡ್ಡಿ, ಟೇಬಲ್ ಟೆನಿಸ್, ಬಾಸ್ಕೆಟ್ ಬಾಲ್ ಮತ್ತು ವಾಲಿಬಾಲ್ ಕ್ರೀಡಾಕೂಟಗಳನ್ನು ಎರಡೂ ದಿನಗಳ ಕಾಲ ಆಯೋಜಿಸಲಾಗಿದೆ. ಎರಡನೇ ದಿನದ ವಿಶೇಷ ಆಕರ್ಷಣೆಯಾಗಿ ಜೂ. 23 ರಂದು ಸಂಜೆ 3 ಗಂಟೆಗೆ ಡಿಜೆ ಜತಿನ್ ರವರು ಡಿಜೆ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಡಾ. ಥಾಮಸ್ ಪಿಂಟೋ, ಮುಖ್ಯಸ್ಥರು, ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ, ಮುಕ್ಕ, ಪ್ರೊ. ಕೆ. ಶ್ರೀನಾಥ್ ರಾವ್, ಸಂಯೋಜಕರು, ಟೆಕ್ ಯುವ-23 ಮತ್ತು ಕಲಾಸ್ಪಂದನ-23 , ಶ್ರೀ ರೋಷನ್ ರಾಕೇಶ್ ನಾಯರ್, ವಿದ್ಯಾರ್ಥಿ ಸಮನ್ವಯಕಾರರು, ಟೆಕ್ ಯುವ-23, ವೈಷ್ಣವಿ ಶಣೈ, ವಿದ್ಯಾರ್ಥಿ ಸಮನ್ವಯಕಾರರು, ಟೆಕ್ ಯುವ-23.,ಸನ್ನಿಧಿ ಶೆಟ್ಟಿ, ವಿದ್ಯಾರ್ಥಿ ಸಮನ್ವಯಕಾರರು, ಕಲಾಸ್ಪಂದನ-23 ಉಪಸ್ಥಿತರಿದ್ದರು.
ವರದಿ: ಪ್ರೊ. ಕೆ. ಶ್ರೀನಾಥ್ ರಾವ್