ಅರಂತೋಡಿನಲ್ಲಿ ಇಂಡಿಯನ್ ರಬ್ಬರ್ ಮಾರ್ಕೆಟಿಂಗ್ ಶುಭಾರಂಭ…

ಸುಳ್ಯ: ಅರಂತೋಡಿನ ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿ ಇಂಡಿಯನ್ ರಬ್ಬರ್ ಮಾರ್ಕೆಟಿಂಗ್ ಜೂ.19 ರಂದು ಶುಭಾರಂಭಗೊಂಡಿತು.
ಅಂಗಡಿಯನ್ನು ಕರಾವಳಿ ಕೊಕೋನೆಟ್ ಪೈಚಾರು ಇದರ ಮಾಲಕ ಅಬೂಬಕ್ಕರ್ ಬೊಳುಬೈಲು
ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಇದರ ನಿವೃತ್ತ ಪ್ರಾಂಶುಪಾಲರು ಕೆ. ಆರ್. ಗಂಗಾಧರ ಕುರುಂಜಿ ವಹಿಸಿದ್ದರು. ಅತಿಥಿಗಳಾಗಿ ಕೆ.ಪಿ.ಸಿ.ಸಿ. ವಕ್ತಾರರಾದ
ಟಿ. ಎಂ. ಶಹೀದ್ ತೆಕ್ಕಿಲ್, ಅರಂತೋಡು ಪ್ರಾಕೃ.ಪ.ಸ.ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ , ಜಾಲ್ಸೂರು ಗ್ರಾ. ಪಂ. ಸದಸ್ಯರಾದ ಮುಜೀಬ್ ಪೈಚಾರು, ಎ.ಪಿ.ಎಂ.ಸಿ ಮಾಜಿ ಉಪಾಧ್ಯಕ್ಷರಾದ ಹಾಜಿ ಉಮ್ಮರ್ ಪಿ. ಎ, ವಿದ್ಯಾಬೋಧಿನಿ ಬಾಳಿಲ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಜತ್ತಪ್ಪ ಮಾಸ್ತರ್, ರಬ್ಬರ್ ಉತ್ಪಾದಕರ ಸಂಘ ಆರಂತೋಡು ಇದರ ಅಧ್ಯಕ್ಷ ರಾದ ಶಶಿಕುಮಾರ್ ಎ. ಕೆ. ಅರಂತೋಡು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಅಶ್ರಫ್ ಗುಂಡಿ ವೇದಿಕೆಯಲ್ಲಿದ್ದರು.
ಸುದ್ದಿ ಬಿಡುಗಡೆ ಪ್ರತಿನಿಧಿ ತಾಜುದ್ದೀನ್ ಅರಂತೋಡು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಇಂಡಿಯನ್ ಮಾರ್ಕೆಟಿಂಗ್ ಅರಂತೋಡಿನ ಹಂಝ ಬೊಳುಬೈಲು, ಕರ್ನಾಟಕ ರಬ್ಬರ್ ಮಾರ್ಕೆಟಿಂಗ್ ಪೈಚಾರ್ ನ ಸಂಶುದ್ದೀನ್, ಶಾರಿಕ್, ಅಬ್ದುಲ್ಲಾ, ನಿರಂಜನ, ಸಿರಾಜ್ ಮತ್ತಿತರರು ಉಪಸ್ಥಿತರಿದ್ದರು.

