ನಗ್ರಿಗುತ್ತು ಜುಮಾದಿ ಬಂಟ ಪಂಜುರ್ಲಿ ಕಲ್ಲುರ್ಟಿ ದೈವದ ನೇಮೋತ್ಸವ – ಧಾರ್ಮಿಕ ಸಭೆ…
ಬಂಟ್ವಾಳ: ಸಜೀಪಮೂಡ ನಗ್ರಿಗುತ್ತು ಜುಮಾದಿ ಬಂಟ ಪಂಜುರ್ಲಿ ಕಲ್ಲುರ್ಟಿ ದೈವದ ನೇಮೋತ್ಸವದ ಅಂಗವಾಗಿ ಜರಗಿದ ಧಾರ್ಮಿಕ ಸಭೆಯನ್ನು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಅಧ್ಯಕ್ಷತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ವಹಿಸಿದ್ದರು. ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಸಜಿಪ ಗುತ್ತು ಗಡಿ ಪ್ರಧಾನರಾದ ಕೋಚು ಭಂಡಾರಿ/ ಮಂಡಪ್ಪ ಶೆಟ್ಟಿ, ವಿವೇಕ್ ಶೆಟ್ಟಿ ನಗ್ರಿಗುತ್ತು, ರೋಹಿತ್ ಶೆಟ್ಟಿ ನಗ್ರಿ ಗುತ್ತು ಮೊದಲಾದವರು ಉಪಸ್ಥಿತರಿದ್ದರು.