ಸಚಿವ ದಿನೇಶ್ ಗುಂಡೂರಾವ್ ಜನತಾ ದರ್ಶನ ಕಾರ್ಯಕ್ರಮ – ಸಂಪಾಜೆ ನಿಯೋಗ ಭೇಟಿ…

ಸುಳ್ಯ: ಉಸ್ತುವಾರಿ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರು ಇತ್ತೀಚೆಗೆ ಸುಳ್ಯದಲ್ಲಿ ನಡೆಸಿದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಂಪಾಜೆ ಗ್ರಾಮ ಅಧ್ಯಕ್ಷರಾದ ಸುಮತಿ ಶಕ್ತಿವೇಲು ಉಪಾಧ್ಯಕ್ಷರಾದ ಹನೀಫ್ ಎಸ್. ಕೆ. ಮಾಜಿ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ಸುಂದರಿ ಮುಂಡಡ್ಕ ವಿಮಲಾ ಪ್ರಸಾದ್ ಭಾಗವಹಿಸಿದರು.
ಸಚಿವರ ಜೊತೆಗೆ ಸಂಪಾಜೆ ಪ್ಲಾಟಿಂಗ್ ಸಮಸ್ಯೆ, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದಲ್ಲಿ ಅಧಿಕಾರಿಗಳ ಕೊರತೆ, ಪಂಚಾಯತ್ ಸಿಬ್ಬಂದಿ ನೇಮಕ, ಡಾಟಾ ಎಂಟ್ರಿ ಸಿಬ್ಬಂದಿ ನೇಮಕ, ಕ್ರಷಿ ಭೂಮಿಗೆ ಆನೆಗಳ ಹಾವಳಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಮರದ ಕೊಂಬೆಗಳ ತೆರವು ಹಲವು ಸಮಸ್ಯೆ, 9-11 ಬಗ್ಗೆ ಸಮಸ್ಯೆ ಬಗ್ಗೆ ಸಚಿವರಿಗೆ ಮನವಿ ಅರ್ಪಿಸಲಾಯಿತು.