ಮೋದಿ- ಶಾ ಜೋಡಿಯ ಕರ್ನಾಟಕ ತಂತ್ರ ಬಿಜೆಪಿಗೇ ತಿರುಗುಬಾಣ – ಕೆಪಿಸಿಸಿ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್…
ಸುಳ್ಯ : ಬಿಜೆಪಿಯು ಹಲವು ತಂತ್ರ ಪ್ರಯೋಗಿಸಿ ಯಶಸ್ವಿಯಾದ ಪ್ರಯೋಗ ಶಾಲೆಯಾದ ದಕ್ಷಿಣ ಕನ್ನಡ ಜಿಲ್ಲೆ ಸಹಿತ ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ ಮುಂದಿನ ವಿಧಾನಸಭೆ, ಲೋಕಸಭಾ, ಸ್ಥಳೀಯ ಚುನಾವಣೆಯ ಮೇಲೆ ಗಂಭೀರ ಪರಿಣಾಮ ಬೀಳಲಿದೆ. ರಾಜ್ಯದಲ್ಲಿ 130ಕ್ಕೂ ಮಿಕ್ಕಿ ಸ್ಥಾನವನ್ನು ಕಾಂಗ್ರೇಸ್ ಪಡೆಯಲಿದ್ದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 20 ಕ್ಕೂ ಹೆಚ್ಚು ಲೋಕಸಭಾ ಸ್ಥಾನ ಪಡೆಯುವ ಲಕ್ಷಣ ಗೋಚರಿಸುತ್ತಿದ್ದು, ಶಿಸ್ತಿನ ಪಕ್ಷವಾದ ಬಿಜೆಪಿಯ ಅಶಿಸ್ತು ಪಕ್ಷದ ಕೇಂದ್ರ ನೇತೃತ್ವಕ್ಕೆ ಗಂಭೀರ ಸವಾಲಾಗಿದೆ. ರಾಜ್ಯದ ಘಟಾನುಘಟಿಗಳಿಗೆ ಪಕ್ಷದ ಅಭ್ಯರ್ಥಿ ಸ್ಥಾನ ನೀಡದೆ ಪಕ್ಷ ಗಂಭೀರವಾದ ಭಿನ್ನಮತ ಹಾಗು ಒಳಜಗಳ ಮತ್ತು ನಿಷ್ಠಾವಂತ ಮತ್ತು ವಲಸಿಗರ ನಡುವಿನ ಗುದ್ದಾಟದಲ್ಲಿ ಮತದಾರರು ಕಂಗೆಟ್ಟು ಹೋಗಿದ್ದಾರೆ. ಇದು ಆಡಳಿತ ಬಿಜೆಪಿ ಪಕ್ಷಕ್ಕೆ ತಿರುಗುಬಾಣವಾಗಿದೆ ಎಂದು ಕೆಪಿಸಿಸಿ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ಹಡಗಿನಿಂದ ಜಿಗಿಯುವವರ ಸಂಖ್ಯೆ ಜಾಸ್ತಿಯಾಗಿದ್ದು ಬಿಜೆಪಿ ಶಾಸಕರ ಸಿಡಿ ವಿಡಿಯೋ, ಭ್ರಷ್ಟಾಚಾರ ಮಿತಿಮೀರಿದ್ದು, ಸ್ವಜನಾ ಪಕ್ಷಪಾತ, ಕೋಮುವಾದದಿಂದ ರಾಜ್ಯದಲ್ಲಿ ಸರಕಾರಕ್ಕೆ ಆಡಳಿತ ವಿರೋಧಿ ಅಲೆ ಹಾಗು ಕಾಂಗ್ರೇಸ್ ಪರವಾಗಿ ಬಿರುಗಾಳಿಯ ಅಲೆ ಗೋಚರಿಸುತ್ತಿದೆ. ಮೋದಿ ಅಮಿತ್ ಶಾ ಜೋಡಿ ಕಂಗೆಟ್ಟು ಹೋಗಿದ್ದಾರೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಖಾರ್ಜುನ ಎಂ ಖರ್ಗೆ,ಎಐಸಿಸಿ ಮಾಜಿ ಅಧ್ಯಕ್ಷರಾದ ರಾಹುಲ್ ಗಾಂಧಿ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್,ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ ಕೆ ಹರಿಪ್ರಸಾದ್ ಸಹಿತ ಕೇಂದ್ರದ ರಾಜ್ಯದ ಪ್ರಮುಖ ನಾಯಕರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 130 ರಿಂದ 180 ರಷ್ಟು ಸ್ಥಾನ ಪಡೆದರೂ ಅಚ್ಚರಿಯಿಲ್ಲ. ಬಿಜೆಪಿ ಐವತ್ತಕ್ಕಿಂತ ಹೆಚ್ಚು, ಜೆಡಿಎಸ್ ಇಪ್ಪತ್ತಕ್ಕಿಂತ ಹೆಚ್ಚು ಸ್ಥಾನ ಗಳಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ಕರಾವಳಿ ಮಲೆನಾಡಿನಿಂದಲೇ ಬಿಜೆಪಿ ಯ ಅವನತಿ ಪ್ರಾರಂಭವಾಗಿದೆ ಎಂದು ಕೆಪಿಸಿಸಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಮತ್ತು ಪಕ್ಷದ ಮುಖ್ಯ ವಕ್ತಾರರಾದ ಟಿ ಎಂ ಶಾಹಿದ್ ತೆಕ್ಕಿಲ್ ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ.