ಗೂನಡ್ಕ ತೆಕ್ಕಿಲ್ ಶಾಲೆಯಲ್ಲಿ ತರಕಾರಿ ದಿನ ಆಚರಣೆ…

ಸುಳ್ಯ: ತೆಕ್ಕಿಲ್ ಮಾದರಿ ಶಾಲೆಯಲ್ಲಿ ತರಕಾರಿಗಳ ದಿನವನ್ನು ಆಚರಣೆ ಮಾಡಲಾಗಿತ್ತು.
ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹ ದಿಂದ ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಿದರು. ವಿದ್ಯಾರ್ಥಿ ಗಳು ತಂದ ತರಕಾರಿಗಳ ಮಹತ್ವವನ್ನು ವಿವರಿಸಿದರು. ಶಾಲೆಯ ಸಹ ಶಿಕ್ಷಕಿಯಾದ ಸೌಮ್ಯರವರು ಮಕ್ಕಳಿಗೆ ಹಲವು ತರಕಾರಿಗಳ ಮಹತ್ವವನ್ನು ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಸಂಪತ್.ಜೆ.ಡಿ ಮತ್ತು ಎಲ್ಲಾ ಶಿಕ್ಷಕ ವೃಂದದವರು ಮತ್ತು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ. ಉನೈಸ್ ಪೆರಾಜೆಯವರು ಉಪಸ್ಥಿತರಿದ್ದರು.


