ತುಳುವ ಸಿರಿ ಹರಿಕಥೆ ಉಚ್ಚಯ ಮುಗಿತಲ…

'ಹರಿಕಥೆಯಿಂದ ಭಕ್ತಿ, ಜ್ಞಾನ ಪ್ರಸಾರ' : ಹರಿಕಥಾ ಉತ್ಸವ ಸಮಾರೋಪದಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ…

ಮಂಗಳೂರು: ‘ಪುರಾಣ ಕಾಲದ ನಾರದಮುನಿಗಳಿಂದ ತೊಡಗಿ ದಾಸವರೇಣ್ಯರಾದ ಕನಕ – ಪುರಂದರರ ವರೆಗೆ ದೇವರ ಮಹಿಮೆಗಳನ್ನು ಕೊಂಡಾಡುತ್ತಾ ಭಕ್ತಿ ಪರಂಪರೆಯನ್ನು ಬೆಳಗಿದ ಹರಿದಾಸರುಗಳು ಪೂಜನೀಯರು. ಹರಿಕಥೆಯಿಂದ ಭಕ್ತಿ, ಜ್ಞಾನ ಎರಡೂ ಪಸರಿಸುತ್ತದೆ. ನಮ್ಮ ತುಳು ಭಾಷೆಯಲ್ಲಿ ನಡೆದ ಪಂಚಪರ್ವ ಹರಿಕಥಾ ಉತ್ಸವ ಹರಿಕಥೆಯ ಇತಿಹಾಸದಲ್ಲಿ ಒಂದು ಮೈಲಿಗಲ್ಲು’ ಎಂದು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ತುಳುವ ಸಿರಿ ಟ್ರಸ್ಟ್ (ರಿ.) ಕುಡ್ಲ ಮತ್ತು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನ ಕುತ್ತಾರ್ ಇವರ ಸಹಯೋಗದಲ್ಲಿ ನಡೆದ ತುಳು ಹರಿಕಥೆ ಉಚ್ಚಯ-2023 ರ ಐದನೇ ದಿನ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಸಮಾರೋಪ ಭಾಷಣ ಮಾಡಿದರು. ಕರ್ನಾಟಕ ಹಿಂದುಳಿದ ವರ್ಗಗಳ ನಿರ್ದೇಶಕ ಕೆ.ಟಿ.ಸುವರ್ಣ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.
ತುಳುವ ಸಿರಿ ಟ್ರಸ್ಟ್(ರಿ.) ಕುಡ್ಲ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಸೌಮ್ಯರವೀಂದ್ರ ಶೆಟ್ಟಿ, ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಸಮಿತಿ ಸದಸ್ಯ ಪವಿತ್ರ ಕುಮಾರ್ ಗಟ್ಟಿ, ಟ್ರಸ್ಟ್ ನ ಕೋಶಾಧಿಕಾರಿ ಕಲಾ ಸಾರಥಿ ತೋನ್ಸೆ ಪುಷ್ಕಳ್ ಕುಮಾರ್, ತುಳುವ ಸಿರಿ ಟ್ರಸ್ಟ್ ನ ಗೌರವ ಸಲಹೆಗಾರ ಕೆ. ರವೀಂದ್ರ ರೈ ಕಲ್ಲಿಮಾರ್ , ಉಪಾಧ್ಯಕ್ಷ ವಿದ್ಯಾಧರ ಶೆಟ್ಟಿ ಮತ್ತು ಸುಧಾ ಸುರೇಶ್, ಜತೆ ಕಾರ್ಯದರ್ಶಿ ರವಿಕುಮಾರ್ ಕೋಡಿ, ಟ್ರಸ್ಟ್ ನ ಸಂಚಾಲಕರಾದ ಅನಂತ ಕೃಷ್ಣ ಯಾದವ್,ಸುರೇಶ್ ಶೆಟ್ಟಿ ಅಂಬ್ಲಮೊಗೆರು,ಸಂಜೀವ ಶೆಟ್ಟಿ ಅಂಬ್ಲಮೊಗರು,ಎನ್.ಟಿ. ರಾಮಕೃಷ್ಣ ನಾಯಕ್ ಉಪಸ್ಥಿತರಿದ್ದರು.
ತುಳುವ ಸಿರಿ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಬಳಿಕ ಹರಿದಾಸ ಯಜ್ಞೇಶ್ ಹೊಸಬೆಟ್ಟು ಇವರಿಂದ ‘ತಪ್ಪುಗು ತರೆದಂಡ’ ಎಂಬ ಹರಿಕಥಾ ಕಾಲಕ್ಷೇಪ ನೆರವೇರಿತು.

img 20230411 wa0054
Sponsors

Related Articles

Back to top button