ಎ. ಎಸ್.ಪೊನ್ನಣ್ಣ ಭೇಟಿ ಮಾಡಿ ಸನ್ಮಾನ ಮಾಡಿದ ದ. ಕ. ಸಂಪಾಜೆ ಕಾಂಗ್ರೆಸ್ ನಿಯೋಗ…

ಸುಳ್ಯ: ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ. ಎಮ್. ಶಾಹಿದ್ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ಪಂಚಾಯತ್ ಸದಸ್ಯರುಗಳಾದ ಪಿ. ಕೆ. ಅಬೂಸಾಲಿ,ಎಸ್. ಕೆ. ಹನೀಫ್, ಸುಳ್ಯ ತಾಲೂಕು NSUI ಕಾರ್ಯದರ್ಶಿ ಉಬೈಸ್ ಗೂನಡ್ಕ, ಆರಂತೋಡು ತಾಲೂಕು ಪಂಚಾಯತ್ ಕ್ಷೇತ್ರ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ರಹೀಮ್ ಬೀಜದಕಟ್ಟೆ, ಉನೈಸ್ ಗೂನಡ್ಕ ಅವರು ಹಿರಿಯ ವಕೀಲರಾದ ಎ. ಎಸ್.ಪೊನ್ನಣ್ಣ ಅವರನ್ನು ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಅಬೂಸಾಲಿ ಪಿ. ಕೆ. ಪೊನ್ನಣ್ಣ ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ರವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾಜಿ ಬ್ಲಾಕ್ ಅಧ್ಯಕ್ಷರಾದ ರಮಾನಂದ ಬೇಕಲ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮೊಯಿದಿನ್ ಕುoಞ , ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಸುರೇಶ, ಕೊಡಗು ಜಿಲ್ಲಾ ಸಾಮಾಜಿಕ ಜಾಲ ತಾಣದ ಸೂರಜ್ ಹೊಸೂರ್, ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ರಾಜೇಶ್ವರಿ ,ಮಾಜಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಹನೀಫ್ ಕೊಯ್ನಾಡ್,ಜಿಲ್ಲಾ ಕಾಂಗ್ರೆಸ್ ನ ಸಂದೀಪ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

6ca5af94 Cb92 4855 867b A724b16e2e3a 300x225

Related Articles