ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಶ್ರೀ ಮಾಧ್ವ ಯುವಕ ಸಂಘ (ರಿ )ವಿದ್ಯಾರ್ಥಿ ನಿಲಯಕ್ಕೆ ಭೇಟಿ…
ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಂದ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕಾರ…

ಬೆಂಗಳೂರು: ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಬೆಂಗಳೂರಿನ ಕೆ ಆರ್ ರೋಡ್ ಸಮೀಪದಲ್ಲಿರುವ ಶ್ರೀ ಮಾಧ್ವ ಯುವಕ ಸಂಘ (ರಿ )ವಿದ್ಯಾರ್ಥಿ ನಿಲಯಕ್ಕೆ ಆಗಮಿಸಿ ಪಾಂಡುರಂಗ ವಿಠಲ ದೇವರ ತೊಟ್ಟಿಲು ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಶ್ರೀಪಾದರಿಂದ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆಯನ್ನು ಸ್ವೀಕರಿಸಿದರು. ಭಗವದ್ಗೀತೆ ಕೇವಲ ಒಂದು ಮತೀಯ ಗ್ರಂಥವಾಗಿರದೆ ಅದು ಜಾಗತಿಕ ಆದೇಶ ಎಂದು ಶ್ರೀಪಾದರು ತಿಳಿಸುತ್ತಾ ,ಈ ಭೂಮಿಯಲ್ಲಿ ಜನಿಸಿದ ಮೇಲೆ ಭಗವದ್ಗೀತೆಯನ್ನು ಓದದಿದ್ದಲ್ಲಿ ನಮ್ಮ ಜನ್ಮವೇ ವ್ಯರ್ಥ ಎಂದು ಶ್ರೀಪಾದರು ತಿಳಿಸಿದರು.
ಎಲ್ಲ ವಿದ್ಯಾರ್ಥಿಗಳು ಶ್ರೀಪಾದರ ಉಪದೇಶದಿಂದ ಪ್ರಭಾವಿತರಾಗಿ ಗೀತಾ ಲೇಖನ ಯಜ್ಞ ದೀಕ್ಷಾ ಬದ್ಧರಾದರು. ಮಾಧ್ವ ಯುವಕ ಸಂಘದ ಅಧ್ಯಕ್ಷರಾದ ಶ್ರೀ ಡಾಕ್ಟರ್ ಎಂ ಆರ್ ವಿ ಪ್ರಸಾದ್, ಮುಖ್ಯಸ್ಥೆ ಶ್ರೀಮತಿ ವಾಣಿ ಕಾರ್ಯದರ್ಶಿ ಶ್ರೀ ಅಭಿಷೇಕ್, ಲೇಖಕಿ ಹಾಗೂ ಉಪನ್ಯಾಸಕಿ ಡಾಕ್ಟರ್ ಪ್ರೇಮ, ಶಂಕರಪುರ ಪೊಲೀಸ್ ಠಾಣೆಯ ಮುಖ್ಯಸ್ಥರು ಮತ್ತಿತರ ಗಣ್ಯರು ಭಾಗವಹಿಸಿದ್ದರು.



