ಅಯೋಧ್ಯೆ ವಿಚಾರಣೆ – ಪ್ರಕರಣ ಹಿಂಪಡೆದ ಸುನ್ನಿ ವಕ್ಫ್ ಮಂಡಳಿ….

ದೆಹಲಿ: ಸುಪ್ರೀಂಕೋರ್ಟ್ ನಲ್ಲಿ ಅಯೋಧ್ಯೆ ರಾಮಜನ್ಮಭೂಮಿ ಮತ್ತು ಬಾಬ್ರಿ ಕಟ್ಟಡ ಭೂ ವಿವಾದ ಪ್ರಕರಣದ ವಿಚಾರಣೆಯ ಕೊನೆಯ ದಿನವಾದ ಇಂದು ಸುನ್ನಿ ವಕ್ಫ್ ಬೋರ್ಡ್ ತಾನು ಸಲ್ಲಿಸಿದ್ದ ಪ್ರಕರಣವನ್ನು ಹಿಂಪಡೆಯಲು ನಿರ್ಧರಿಸಿದೆ.
ಸುನ್ನಿ ವಕ್ಫ್ ಬೋರ್ಡ್ ಮಂಡಳಿಯ ಅಧ್ಯಕ್ಷರು ಹಾಗೂ ಮಧ್ಯಸ್ಥಿಕೆ ಸಮಿತಿಯ ಸದಸ್ಯರಾದ ಶ್ರೀರಾಮ್ ಪಂಚು ಅವರಿಗೆ ಪ್ರಕರಣವನ್ನು ಹಿಂಪಡೆಯಲು ಅಫಿಡವಿಟ್ ಕಳುಹಿಸಿದ್ದಾರೆ ಎಂದು ಮಧ್ಯಸ್ಥಿಕೆ ನಿಯೋಗ ಸುಪ್ರೀಂಕೋರ್ಟ್ ಗೆ ಮಾಹಿತಿ ನೀಡಿದೆ ಎಂಬುದಾಗಿ ತಿಳಿದುಬಂದಿದೆ. ಸುನ್ನಿ ವಕ್ಫ್ ಮಂಡಳಿ ಮನವಿಯನ್ನು ಹಿಂಪಡೆಯುವ ಬಗ್ಗೆ ನ್ಯಾಯಾಲಯದಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿದುಬಂದಿದೆ. ಈ ಧಿಡೀರ್ ಬೆಳವಣಿಗೆ ವಕ್ಫ್ ಮಂಡಳಿ ಸದಸ್ಯರೊಳಗೆ ಅಸಮಾಧಾನ ತಂದಿದೆ.

Ayodhya Ram Mandir 848x500 300x177

Download 1 2

Related Articles

Leave a Reply

Your email address will not be published. Required fields are marked *