ಸೆ 15 ರಂದು ಬಿಳಿಯಾರಿನಲ್ಲಿ ಈದ್ ಮಿಲಾದ್ ಪ್ರಯುಕ್ತ ಇಷ್ಕೆ ಮದೀನಾ ಮಿಲಾದ್ ಕಾನ್ಫರೆನ್ಸ್…

ಫಝಲ್ ತಂಗಳ್ ಮತ್ತು ಧಾರ್ಮಿಕ ಪಂಡಿತ ಮುಸ್ತಫಾ ಹುದವಿ ಸಮಾರಂಭದಲ್ಲಿ ಭಾಗಿ...

ಸುಳ್ಯ: ಹಿಮಾಯತುಲ್ ಇಸ್ಲಾಂ ಕಮಿಟಿ ಖಿಳ್ರಿಯ ಮಸ್ಜಿದ್ ಬಿಳಿಯಾರು ಅರಂತೋಡು ಇದರ ಆಶ್ರಯದಲ್ಲಿ ಸೆ.15 ರಂದು ಬಿಳಿಯಾರು ಮಸೀದಿ ವಠಾರದಲ್ಲಿ ಈದ್ ಮಿಲಾದ್ ಪ್ರಯುಕ್ತ ಇಷ್ಕೆ ಮದೀನಾ ಮಿಲಾದ್ ನಡೆಯಲಿದೆ.
ರಾತ್ರಿ 7 ಗಂಟೆಗೆ ಸಭಾ ಕಾರ್ಯಕ್ರಮವನ್ನು ಬಹು ಸಯ್ಯದ್ ಫಝಲ್ ಹಾಮಿದ್ ಕೊಯಮ್ಮ ತಂಘಲ್ ದುಗಲಡ್ಕ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಮೀದ್ ಹಾಜಿ ವಹಿಸಲಿದ್ದಾರೆ.ಪ್ರಾಸ್ತಾವಿಕ ಭಾಷಣ ವನ್ನು ಬಹು ಮಜೀದ್ ದಾರಿಮಿ ಮಾತನಾಡಲಿದ್ದಾರೆ.
ಮುಖ್ಯ ಪ್ರಭಾಷಣಗಾರ ಉಸ್ತಾದ್ ಬಹು ಮುಸ್ತಫಾ ಹುದವಿ ಅಕ್ಕೊಡ್, ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷ ಟಿ.ಎಂ.ಶಾಹಿದ್ ತೆಕ್ಕಿಲ್, ಸೂಡ ಅಧ್ಯಕ್ಷ ಕೆ.ಎಂ. ಮುಸ್ತಾಫ ಸುಳ್ಯ, ಅರಂತೋಡು ಜುಮ್ಮಾ ಮಸೀದಿ ಖತೀಬ್ ಇಸ್ಮಾಯಿಲ್ ಫೈಝಿ ಗಟ್ಟಿಮನೆ , ಸುಳ್ಯ ತಾಲ್ಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸಂಶುದ್ದೀನ್ ಸುಳ್ಯ ಮುಂತಾದವರು ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಹಲವಾರು ಧಾರ್ಮಿಕ ಸಾಮಾಜಿಕ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

whatsapp image 2025 09 13 at 1.08.19 pm

Related Articles

Back to top button