ಗೀತಾ ಮಂದಿರದಲ್ಲಿ ಪುಷ್ಯ ಸ್ವರ್ಣಾಮೃತ ಪ್ರಾಶನ ಆರಂಭ…

ಉಡುಪಿ : ನವಜಾತ ಶಿಶುವಿನಿಂದ ತೊಡಗಿ ಹರಿನಾರು ವರ್ಷದ ವರೆಗಿನ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಳ , ದೈಹಿಕ ಬೆಳವಣಿಗೆ, ಬುದ್ಧಿಶಕ್ತಿ ವರ್ಧನೆ, ಜೀರ್ಣಕ್ರಿಯೆ ಸುಧಾರಣೆ, ವರ್ಣ ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಆರೋಗ್ಯ ಸಂಜೀವಿನಿ ಎಂದು ಗುರುತಿಸಲಾಗುವ ಸ್ಪರ್ಣ ಬಂದು ಪ್ರಾಶನವನ್ನು ಗೀತಾ ಮುಂದಿರದಲ್ಲಿ ಆರಂಭಿಸಲಾಗಿದೆ.
ಶ್ರೀ ಪುತ್ತಿಗೆ ಶ್ರೀಪಾದರ ಆಶೀರ್ವಾದದೊಂದಿಗೆ ಆರಂಭಿಸಲಾಗಿರುವ ಈ ಮಕ್ಕಳ ಸಮಗ್ರ ಬೆಳವಣಿಗೆಯ ಅಭಿಯಾನಕ್ಕೆ ದಿವಾನರಾದ ನಾಗರಾಜ್ ಆಚಾರ್ಯ ದೀಪ ಬೆಳಗಿ ಚಾಲನೆ ನೀಡಿದರು.
ಈ ಸೌಲಭ್ಯದ ನೇತೃತ್ವ ವಹಿಸಿರುವ ಶ್ರೀ ಉಡುಪಿ ಕ್ಲಿನಿಕ್ ನ ಡಾ.ಅಮೇಯಾ ತಂತ್ರಿ, ಡಾ. ರವಿರಾಜ್ ಭಟ್, ಫಾರ್ಮಸಿ ಅಸಿಸ್ಟೆಂಟ್ ಯಶಸ್ವಿ ವಾಲ್ಗೊಂಡಿದ್ದರು. ಗೀತಾ ಮಂದಿರದ ವಿದ್ವಾನ್ ಕೆ.ವಿ. ರಮಣಾಚಾರ್ಯ, ಉಮಾಪ್ರಸಾದ್,ಕಿರಣ್ ಭಟ್, ಪಾಲಕರಾದ ಯೋಗಿನಿ ತಂತ್ರಿ ಉಪಸ್ಥಿತರಿದ್ದರು.
ಪ್ರತೀ ತಿಂಗಳ ಪುಷ್ಯ ನಕ್ಷತ್ರದ ಒಂದು ದಿನ ಬೆಳಗ್ಗೆ ಹತ್ತುವರೆಯಿಂದ ಅಪರಾಹ್ನ ಮೂರರ ವರೆಗೆ ಗೀತಾ ಮಂದಿರದ ಸುಗುಣಮಾಲಾ ಸಭಾಂಗಣದಲ್ಲಿ ಸಾರ್ವಜನಿಕರಿಗೆ ಈ ಸೌಲಭ್ಯ ಲಭ್ಯವಿದೆ. ಮೊದಲ ದಿನ 40 ಮಕ್ಕಳು ಪ್ರಾಶನ ಸೇವಿಸಿದ್ದು ಜೂನ್ ತಿಂಗಳ 17 ನೇ ತಾರೀಕು ಮುಂದಿನ ಪುಷ್ಯ ನಕ್ಷತ್ರ ದಿನವಾಗಿದೆ.

ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯೋಜನ ಪಡೆದುಕೊಳ್ಳುವಂತೆ ಶ್ರೀಮಠದ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ 8861294065 ಅನ್ನು ಸಂಪರ್ಕಿಸಬಹುದಾಗಿದೆ.

Whatsapp Image 2026 05 25 At 11.16.34 Pm 1 169x300

Related Articles