ಪೆರಾಜೆ ಶ್ರೀರಾಮಚಂದ್ರಾಪುರ ಮಠ – ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಭೇಟಿ…
ಬಂಟ್ವಾಳ: ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆಯತ್ತಿರುವ ‘ನವರಾತ್ರ ನಮಸ್ಯಾ” ನವರಾತ್ರಿ ಉತ್ಸವದ ಅಂಗವಾಗಿ ಶ್ರೀರಾಜರಾಜೇಶ್ವರಿಯ ಮಹಾಸಮಾರಾಧನೆಮತ್ತು ಲಲಿತೋಪಾಖ್ಯಾನ ಪ್ರವಚನದ ಸುಸಂದರ್ಭದಲ್ಲಿ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯವರನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿಯಾಗಿ ಆಶೀರ್ವಾದ ಪಡೆದರು.
ಮಠದ ಸಮಿತಿ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್,ಆಡಳಿತ ಸಮಿತಿಯ ಶೈಲಜಾ ಕೆ.ಟಿ.ಭಟ್,ಉದಯಶಂಕರ ಮಿತ್ತೂರು,ಉಂಡೆಮನೆವಿಶ್ವೇಶ್ವರ ಭಟ್ ಗ್ರಾಮ ಪಂಚಾಯತ್ ಸದಸ್ಯ ರಾಜಾರಾಮ ಕಾಡೂರು,ಹರೀಶ್ ಪಾಣೂರು,ವಿನೀತ್ ಶೆಟ್ಟಿ ಮೊದಲಾದವರಿದ್ದರು.