ದುಬೈ ಮಲಬಾರ್ ಕಲೆ ಮಾತ್ತು ಸಾಂಸ್ಕೃತಿಕ ವೇದಿಕೆಯ 25ನೇ ವಾರ್ಷಿಕೋತ್ಸವ – ಕರಪತ್ರ ಬಿಡುಗಡೆ…
ಬೆಂಗಳೂರು :ದುಬೈ ಮಲಬಾರ್ ಕಲೆ ಮಾತ್ತು ಸಾಂಸ್ಕೃತಿಕ ವೇದಿಕೆಯ 25ನೇ ವಾರ್ಷಿಕೋತ್ಸವದ ಅಂಗವಾಗಿ ನವೆಂಬರ್ 12 ರಂದು ದುಬೈಯಲ್ಲಿ ನಡೆಯುವ ವಿವಿಧ ಕ್ಷೇತ್ರದ ಗಣ್ಯರಿಗೆ ಸನ್ಮಾನ ಮಾಡಲಿರುವ 24 ಕಾರ್ಯಕ್ರಮದ ಕರಪತ್ರವನ್ನು ಕರ್ನಾಟಕ ರಾಜ್ಯದ ಪೌರಾಡಳಿತ ಮಾತ್ತು ಹಜ್ ಸಚಿವರಾದ ರಹೀಮ್ ಖಾನ್ ಬೆಂಗಳೂರಿನಲ್ಲಿ ಬಿಡುಗಡೆ ಗೊಳಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಮುಖ್ಯ ವಕ್ತಾರರಾದ ಟಿ ಎಂ ಶಾಹಿದ್ ತೆಕ್ಕಿಲ್, ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮತ್ತು ಕಾಸರಗೋಡು ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಶ್ರಫ್ ಕಾರ್ಲೆ, ಮೊಗ್ರಲ್ ಪುತ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹಾಗು ಸಂಘಟನೆಯ ಉಪಾಧ್ಯಕ್ಷರಾದ ಮುಜೀಬ್ ಕಂಬಾರ್, ಉದ್ಯಮಿ ಯೂಸುಫ್ ಅಲ್ ಫಲಾಹ್ ಮೊದಲಾದವರು ಉಪಸ್ಥಿತರಿದ್ದರು.