ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಿಗೆ ಗೌರವಾರ್ಪಣೆ…

ಸುಳ್ಯ: ಸುಳ್ಯದ ನಾಗಪಟ್ಟಣ ದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆ.ಎಫ್.ಡಿ.ಸಿ ಕಾರ್ಖಾನೆಗೆ ಮೊದಲ ಬೇಟಿ ನೀಡಿದ ಶ್ರೀ ಬಸವರಾಜ್ ನೀಲಪ್ಪ ಶಿವಣ್ಣನವರ್ ಮಾನ್ಯ ಶಾಸಕರು ಬ್ಯಾಡಗಿ ವಿಧಾನ ಸಭಾ ಕ್ಷೇತ್ರ ಹಾಗೂ ಅಧ್ಯಕ್ಷರು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಮತ್ತು ನಿಗಮದ ನೂತನ ವ್ಯವಸ್ಥಾಪಕ ನಿರ್ಧೇಶಕರಾಗಿರುವ ಮಹೇಶ್.ಬಿ ಶಿರೂರ್ ರವರನ್ನು ಮಲೆನಾಡು ಚಾರಿಟೇಬಲ್ ಟ್ರಸ್ಟ್ [ರಿ] ವತಿಯಿಂದ ಶಾಲು, ಹಾರ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ, ನ.ಪಂ ಸದಸ್ಯರಾದ ರಿಯಾಝ್ ಕಟ್ಟೆಕ್ಕಾರ್, ನ.ಪಂ ಸದಸ್ಯರಾದ ಶರೀಫ್ ಕಂಠಿ, ಉದ್ಯಮಿ ಸಲೀಂ ಪೆರುಂಗೋಡಿ ಹಾಗೂ ಕುಮಾರ್ ನಾಗಪಟ್ಟಣ ಉಪಸ್ಥಿತರಿದ್ದರು.

whatsapp image 2024 09 24 at 8.33.17 pm

Sponsors

Related Articles

Back to top button