ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜಿಪನಡು ಇದರ ಬ್ರಹ್ಮಕಲಶದ ದಿನಾಚರಣೆ…

ಬಂಟ್ವಾಳ: ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜಿಪನಡು ಇದರ ಬ್ರಹ್ಮಕಲಶದ ದಿನಾಚರಣೆಯ ಅಂಗವಾಗಿ ಈ ದೇವರಿಗೆ ಕಲಶಾಭಿಷೇಕ, ಫಲಪಂಚಾಮೃತ ಅಭಿಷೇಕ, ಧನ್ವಂತರಿ ಹೋಮ, ಪ್ರವೇಶದ್ವಾರ ಲೋಕಾರ್ಪಣೆ ಬ್ರಹ್ಮಶ್ರೀ ನೀಲೇಶ್ವರ ಕೆ ಯು ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜರಗಿತು.
ಸಜಿಪ ಮಾಗಣೆತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಮುಳ್ಳುಂಜ ವೆಂಕಟೇಶ್ವರ ಭಟ್, ಗಣಪತಿ ಭಟ್, ರಾಮಕೃಷ್ಣ ಭಟ್, ಕೆ ರಾಧಾಕೃಷ್ಣ ಆಳ್ವ, ಪ್ರವೀಣ್ ಆಳ್ವ, ಪ್ರವೀಣ್ ಬಂಡಾರಿ, ಪ್ರವೀಣ್ ಶೆಟ್ಟಿ, ಶುಭಾಶ್ , ಸುಧಾಕರ ಕೆ ಟಿ, ಕಿಶನ್ ಶೇಣವ, ಯಶವಂತ ಡಿ. ಮೊದಲಾದವರು ಉಪಸ್ಥಿತರಿದ್ದರು.