ಮಸ್ಕತ್ – ಟಿ ಎಂ ಶಾಹಿದ್ ತೆಕ್ಕಿಲ್ ಅವರಿಗೆ ಸನ್ಮಾನ…

ಒಮಾನ್ : ಮಸ್ಕತ್ ಪ್ರವಾಸದಲ್ಲಿರುವ ಟಿ ಎಂ ಶಾಹಿದ್ ತೆಕ್ಕಿಲ್ ಅವರಿಗೆ ದಕ ಜಿಲ್ಲೆಯ ಸುಳ್ಯದವರ ಅನಿವಾಸಿ ಸಂಘಟನೆಯಾದ ಅನ್ಸಾರುಲ್ ಮಸಾಕೀನ್ ಅಸೋಸಿಯೇಷನ್ ಮಸ್ಕತ್ ಇದರ ವತಿಯಿಂದ ಸನ್ಮಾನ ಸಮಾರಂಭ ನಡೆಯಿತು. ಮಸ್ಕತ್ ನ ಅಸ್ಮಾ ಅಲ್-ಝವಾವಿ ಮಸೀದಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಅನ್ಸಾರುಲ್ ಮಾಸಾಕೀನ್ ಅಸೋಸಿಯೇಷನ್ ಇದರ ಅಧ್ಯಕ್ಷರಾದ ಅಬ್ದುಲ್ ರಶೀದ್ ಶಾಂತಿನಗರ ಸ್ವಾಗತಿಸಿ, ಟಿ ಎಂ ಶಾಹಿದ್ ತೆಕ್ಕಿಲ್ ಅವರು ಸಾಮಾಜಿಕ, ಧಾರ್ಮಿಕ,ಶಿಕ್ಷಣ,ರಾಜಕೀಯ, ಸಹಕಾರಿ ಹಾಗು ಇತರ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದು ಅವರನ್ನ ಸನ್ಮಾನಿಸುವುದು ಗೌರವಿಸುವುದು ನಮ್ಮ ಕರ್ತವ್ಯ ಎಂದರು. ನಂತರ ಶಾಲು ಹೊದಿಸಿ ಒಮಾನ್ ದೇಶದ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಸನ್ಮಾನವನ್ನು ಸ್ವೀಕರಿಸಿದ ಟಿ.ಎಂ ಶಹೀದ್ ತೆಕ್ಕಿಲ್ ಈ ಸಂಘಟನೆಯ ಕಾರ್ಯ ವೈಖರಿಗಳ ಬಗ್ಗೆ ಮಾತನಾಡಿ, ಕಳೆದ ಹತ್ತು ವರ್ಷಗಳಿಂದೀಚೆಗೆ ತಾವು ದುಡಿದು ಸಂಪಾದಿಸಿದ ಹಣವನ್ನು ಒಟ್ಟಾಗಿ ಸೇರಿ ಒಂದು ಭಾಗವನ್ನು ಸುಳ್ಯ ತಾಲೂಕಿನ ಬಡವರಿಗೆ, ರೋಗಿಗಳಿಗೆ, ಶಿಕ್ಷಣ ಕ್ಷೇತ್ರಕ್ಕೆ ಈ ಸಂಘಟನೆ ನೀಡುತ್ತಿರುವ ಅಪಾರ ಕೊಡುಗೆಗಳ ಬಗ್ಗೆ ಶ್ಲಾಘನೆ ವ್ಯಕ್ತ ಪಡಿಸಿದರು. ಈ ಸಂಘಟನೆಯ ಕಾರ್ಯಕ್ರಮ ಇತರರಿಗೆ ಮಾದರಿ ಎಂದು ಅಭಿಪ್ರಾಯಪಟ್ಟರು. ಮಾತ್ರವಲ್ಲದೆ ಸನ್ಮಾನಕ್ಕೆ ಧನ್ಯವಾದ ತಿಳಿಸಿದರು. ಅಶ್ರಫ್ ಭಾರತ್ ಧನ್ಯವಾದವಿತ್ತರು. ಈ ಸಂದರ್ಭದಲ್ಲಿ ಫಯಾಝ್ ಪಾಜಪಳ್ಳ, ಅಬ್ಬಾಸ್ ಮರಕ್ಕಡ, ಸಾದಿಕ್ ಹೆಚ್.ಎಲ್.ಎಸ್, ಕಮರುದ್ದೀನ್ ಗೂನಡ್ಕ,ಸಹಿತ ಜಿಲ್ಲೆಯ ಹಲವಾರು ಯುವಕರು ಉಪಸ್ಥಿತರಿದ್ದರು.

whatsapp image 2024 03 30 at 11.19.54 am

Sponsors

Related Articles

Back to top button