ಕಲ್ಲುಗುಂಡಿಯಲ್ಲಿ SKSSF ನ ನೂತನ ಕಛೇರಿ ಉದ್ಘಾಟನೆ…
ಸುಳ್ಯ: ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ SKSSF ಶಾಖೆಯ ಕಛೇರಿಯನ್ನು ಜ.2 ರಂದು ರಂದು ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ) ಇದರ ಸ್ಥಾಪಕಾಧ್ಯಕ್ಷರಾದ ಟಿ.ಎಂ.ಶಹೀದ್ ತೆಕ್ಕಿಲ್ ಅವರು ಉದ್ಘಾಟಿಸಿದರು.
ನಂತರ ಅವರು ಮಾತನಾಡಿ SKSSFನ ಧ್ಯೇಯ ವಾಕ್ಯವೇ ವಿನಯಂ, ವಿಜ್ಞಾನಂ, ಸೇವನಂ. ಅದರಂತೆ ನಾವು ಸೇವೆ ಸಲ್ಲಿಸಿದಾಗ ಮಾತ್ರ ಜನ ನಮ್ಮನ್ನು ಗುರುತಿಸುತ್ತಾರೆ. ನಾವು ನಮ್ಮ ವೈಯಕ್ತಿಕ ಬೆಳವಣಿಗೆಗಾಗಿ ಕೆಲಸ ಮಾಡದೆ ಸಂಸ್ಥೆಯ ಬೆಳವಣಿಗೆಗಾಗಿ ಕೆಲಸಮಾಡ ಬೇಕೆಂದರು. ಬೇರೆ ದೇಶಗಳಿಗೆ ಹೋಲಿಸಿದರೆ ಮುಸಲ್ಮಾನರಿಗೆ ಜೀವಿಸಲು ಭಾರತ ಉತ್ತಮವಾದ ದೇಶ. ಆದುದರಿಂದ ಇಲ್ಲಿ ಪರಧರ್ಮ ಸಹಿಷ್ಣುತೆಯೊಂದಿಗೆ ಜಾತ್ಯಾತೀತವಾಗಿ ಕೋಮುಸೌಹಾರ್ಧತೆಯೊಂದಿಗೆ ಜೀವಿಸಬೇಕೆಂದರು. ನಮ್ಮ ಯುವಕರು ಸಮಸ್ತ ನೇತಾರರ ಆದರ್ಶ ಮತ್ತು ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಮುನ್ನಡೆಯಬೇಕೆಂದರು.
ಸಮಾರoಭದ ಅಧ್ಯಕ್ಷತೆಯನ್ನು ಕಲ್ಲುಗುಂಡಿ SKSSF ಶಾಖೆಯ ಅಧ್ಯಕ್ಷ ರಿಯಾಝ್ ಕಲ್ಲುಗುಂಡಿ ವಹಿಸಿದರು. ಸುಳ್ಯ ತಾಲೂಕು ಮದರಸ ಮ್ಯಾನೇಜ್ ಮೆಂಟ್‌ನ ಕೋಶಾಧಿಕಾರಿ ಹಮೀದ್ ಹಾಜಿ ಬಿಳಿಯಾರು ದುವಾ ನೆರವೇರಿಸಿದರು. ಅತಿಥಿಗಳಾಗಿ ಪೇರಡ್ಕ ಮುಹಿದ್ಧೀನ್, ಜುಮಾಮಸೀದಿ ಖತೀಬರಾದ ರಿಯಾಝ್ ಫೈಝಿ ಎಮ್ಮೆಮಾಡು, ಕಲ್ಲುಗುಂಡಿ ಮುಹಿದ್ಧೀನ್ ಜುಮಾ ಮಸೀದಿ ಅಧ್ಯಕ್ಷ ಹಾಜಿ ಎಚ್.ಎ. ಅಬ್ಬಾಸ್ ಬಾಲೆಂಬಿ, ಪೇರಡ್ಕ ಮುಹಿದ್ಧೀನ್ ಜುಮಾ ಮಸೀದಿ ಅಧ್ಯಕ್ಷ ಆಲಿಹಾಜಿ, ಅರಂತೋಡು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ, ಅಹ್ಮದ್ ಪಾರೆ, ಅಹಮ್ಮದ್ ಸುಪ್ರೀಮ್ ಸುಳ್ಯ, ಅಕ್ಬರ್ ಕರಾವಳಿ, ಪುತ್ತುಚ್ಚ ಸುಳ್ಯ, ಗ್ರಾ.ಪಂ. ಸದಸ್ಯ ಎಸ್. ಕೆ. ಹನೀಫ್ ಸಂಪಾಜೆ ಭಾಗವಹಿಸಿದರು. ವೇದಿಕೆಯಲ್ಲಿ ಕಲ್ಲುಗುಂಡಿ SKSSF ಶಾಖೆಯ ಉಪಾಧ್ಯಕ್ಷ ಜೈನುದ್ದೀನ್ ಯಮಾನಿ, ಕೆ. ಎಂ. ರಫೀಕ್, ಮುನೀರ್ ದಾರಿಮಿ ಗೂನಡ್ಕ ಹಸೈನಾರ್ ಗುಡ್ಡೆ, ಆಮು ಕರಾವಳಿ, ಪಿ.ಎ. ಆಮು ಬಾಲೆಂಬಿ ಮೊದಲಾದವರಿದ್ದರು. ಸುಳ್ಯ ತಾಲೂಕು ಮದರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ತಾಜ್ ಮಹ್ಮದ್ ಸಂಪಾಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರಜಾಕ್ ಸೂಪರ್ ವಂದಿಸಿದರು. ಸಮಾರಂಭದ ನಂತರ ಝೈನುದ್ಧೀನ್ ಯಮಾನಿ ಅವರ ನೇತೃತ್ವದಲ್ಲಿ ಮಜಿಲೀಸ್ ನ್ನೂರ್ ನಡೆಯಿತು.