ಕೆಸಿಎಫ್ ಒಮಾನ್ ಸ್ಟೂಡೆಂಟ್ಸ್ ಮೀಲಾದ್ ಫೆಸ್ಟ್ – 2021…
ಒಮಾನ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಇಮಾಮ್ ನವವಿ ಮದರಸ ಒಮಾನ್ ಇದರ ವತಿಯಿಂದ ಪ್ರವಾದಿ ಮುಹಮ್ಮದ್ (ಸ.ಅ) ರವರ ಜನ್ಮ ದಿನಾಚರಣೆಯ ಅಂಗವಾಗಿ ಮದರಸ ವಿದ್ಯಾರ್ಥಿಗಳ ವಿವಿಧ ಸ್ಪರ್ಧೆಯನ್ನು ಒಳಗೊಂಡ ಇಸ್ಲಾಮಿಕ್ ಸಾಂಸ್ಕೃತಿಕ ಚಿಣ್ಣರ ಕಲರವ ಮೀಲಾದ್ ಫೆಸ್ಟ್ ಕಾರ್ಯಕ್ರಮವು ಝೂಮ್ ಮೂಲಕ ಮದರಸ ಚಯರ್ಮೆನ್ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ಕೊಡಗು ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಇಮಾಮ್ ನವವಿ ಮದರಸ ಪ್ರಾಂಶುಪಾಲರಾದ ಬಹು ಉಬೈದುಲ್ಲಾ ಸಖಾಫಿ ಮಿತ್ತೂರು ಇವರು ಸ್ವಾಗತಿದ ಕಾರ್ಯಕ್ರಮವನ್ನು ಕೆಸಿಎಫ್ ಒಮಾನ್ ಅಧ್ಯಕ್ಷರಾದ ಜನಾಬ್ ಅಯ್ಯೂಬ್ ಕೋಡಿ ಇವರು ಉದ್ಘಾಟಿಸಿದರು. ಆರಂಭದಲ್ಲಿ ಮದರಸ ಉಸ್ತಾದ್ ಸಲೀಮ್ ಮಿಸ್ಬಾಯಿ ದುಅ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗದ ಕಾರ್ಯದರ್ಶಿ ಉಮರ್ ಸಖಾಫಿ ಮಿತ್ತೂರು, ಕೆಸಿಎಫ್ ಒಮಾನ್ ಪ್ರಧಾನ ಕಾರ್ಯದರ್ಶಿ ಸಾದಿಕ್ ಹಾಜಿ ಸುಳ್ಯ, ಕೋಶಾಧಿಕಾರಿ ಜನಾಬ್ ಆರಿಫ್ ಕೋಡಿ, ಸಾಂತ್ವನ ವಿಭಾಗದ ಅಧ್ಯಕ್ಷ ಇಬ್ರಾಹಿಮ್ ಅತ್ರಾಡಿ,ಇಮಾಮ್ ನವವಿ ಮದರಸ ಕನ್ವೀನರ್ ಹಂಝ ಹಾಜಿ ಕನ್ನಂಗಾರ್ ಹಾಗೂ ಮದರಸ ಪ್ರಾಧ್ಯಾಪಕಿ ಜಸೀರ ಇಲ್ಹಾಮಾಃ ಮತ್ತು ಆಯಿಶಾ ಶಬೀಬ ಇವರು ಉಪಸ್ಥಿತರಿದ್ದರು. ಕಲಂದರ್ ಬಾವ ವಂದಿಸಿ, ಮಝೀರ್ ಬಜ್ಪೆ ಕಾರ್ಯಕ್ರಮ ನಿರೂಪಿಸಿದರು.